ಮುಳ್ಳೇರಿಯ: ಇರಿಯಣ್ಣಿಯ ಜಿವಿಎಚ್‍ಎಸ್‍ಎಸ್ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಚಂದ್ರಯಾನ 3ರ ಸಾಫ್ಟ್ ಲ್ಯಾಂಡಿಂಗ್‍ಗೆ ಸಂತಸ ವ್ಯಕ್ತಪಡಿಸಿ ಸಿಹಿ ವಿತರಿಸಿದರು. ಶಾಲಾ ವಿಜ್ಞಾನ ಕೂಟದ ಆಶ್ರಯದಲ್ಲಿ ಶಾಲೆಯ ವತಿಯಿಂದ ಮಕ್ಕಳು ಹಾಗೂ ಶಿಕ್ಷಕರಿಗೆ ಐತಿಹಾಸಿಕ ಕ್ಷಣದ ನೇರಪ್ರಸಾರ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಮುಖ್ಯಶಿಕ್ಷಕ ಎ.ಎಂ.ಅಬ್ದುಲ್ ಸಲಾಂ, ಹಿರಿಯ ಸಹಾಯಕ ಸಿ. ಶಾಂತಕುಮಾರಿ, ಎಸ್‍ಆರ್‍ಜಿ ಸಂಚಾಲಕ ಕೆ. ನಿಮಿಷಬಾಬು, ಸಿಬ್ಬಂದಿ ಕಾರ್ಯದರ್ಶಿ ಕೆ. ಬಿಂದು ನೇತೃತ್ವ ವಹಿಸಿದ್ದರು.

.jpeg)
