ವಾಷಿಂಗ್ಟನ್: ಅಮೆರಿಕದಲ್ಲಿ ಬಂದೂಕು ದಾಳಿಯಿಂದ ಮಕ್ಕಳ ಸಾವುಗಳ ಪ್ರಮಾಣ ಹೆಚ್ಚಿದೆ ಎಂದು ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಟಿಸಿದ ಹೊಸ ಅಧ್ಯಯನ ಹೇಳಿದೆ.
ಅಮೆರಿಕದಲ್ಲಿ ಬಂದೂಕು ದಾಳಿಯಿಂದ ಮಕ್ಕಳ ಹತ್ಯೆ ಹೆಚ್ಚು: ಅಧ್ಯಯನ ವರದಿ
0
ಆಗಸ್ಟ್ 25, 2023
Tags
0
samarasasudhi
ಆಗಸ್ಟ್ 25, 2023
ವಾಷಿಂಗ್ಟನ್: ಅಮೆರಿಕದಲ್ಲಿ ಬಂದೂಕು ದಾಳಿಯಿಂದ ಮಕ್ಕಳ ಸಾವುಗಳ ಪ್ರಮಾಣ ಹೆಚ್ಚಿದೆ ಎಂದು ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಟಿಸಿದ ಹೊಸ ಅಧ್ಯಯನ ಹೇಳಿದೆ.
ಅಧ್ಯಯನದ ಪ್ರಕಾರ 2021ರಲ್ಲಿ 4,752 ಮಕ್ಕಳು ಬಂದೂಕು ಸಂಬಂಧಿತ ದಾಳಿಯಲ್ಲಿ ಮೃತಪಟ್ಟಿದ್ದಾರೆ.
2020ರಿಂದ ಅಮೆರಿಕದಲ್ಲಿ ಮಕ್ಕಳ ಸಾವಿಗೆ ಬಂದೂಕು ದಾಳಿ ಮೊದಲ ಕಾರಣವಾಗಿದೆ. ಈ ವರ್ಷದ ಆರಂಭದಲ್ಲಿ ನಾಶ್ವಿಲ್ಲೆ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮಕ್ಕಳು ಮತ್ತು ಮೂವರು ಶಿಕ್ಷಕರ ದುರಂತ ಸಾವಿನ ನಂತರ ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಸಂಸದರು ವಿಶೇಷ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
ಬಂದೂಕಿನಿಂದ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡವರಲ್ಲಿ ಕಪ್ಪುವರ್ಣದ ಶೇ 67ರಷ್ಟು ಹಾಗೂ ಬಿಳಿ ವರ್ಣದ ಶೇ 78ರಷ್ಟು ಮಕ್ಕಳು ಸೇರಿದ್ದಾರೆ ವರದಿ ತಿಳಿಸಿದೆ.