ಬದಿಯಡ್ಕ: ಉಡುಪಿಯ ರಾಜಾಂಗಣದಲ್ಲಿ ಕಾಸರಗೋಡಿನ ಡಾ.ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ, ಸಾಂಸ್ಕøತಿಕ ಸಂಘಟನೆಯ ಸದಸ್ಯರು ನೃತ್ಯ ಸಹಿತವಾದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮವನ್ನು ನೀಡಿದರು.
ಉಡುಪಿಯ ರಾಜಾಂಗಣದಲ್ಲಿ ನಡೆದ ಅಖಂಡ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಸಾಂಸ್ಕøತಿಕ ವೇದಿಕೆಯಲ್ಲಿ ಕಾಸರಗೋಡಿನ ಗಡಿನಾಡ ಕನ್ನಡ ಸಾಂಸ್ಕøತಿಕ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದುವು. ಈ ಸಂದರ್ಭದಲ್ಲಿ ಗುರುರಾಜ್ ಕಾಸರಗೋಡು ಹಾಗೂ ಡಾ.ವಾಣಿಶ್ರೀ ಕಾಸರಗೋಡು ಅವರು ಕನ್ನಡ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಲಾವಿದರಾದ ಅಹನಾ ಎಸ್ ರಾವ್, ಶ್ರೀಕೃಷ್ಣ ಅಡಿಗ, ಕೃಪಾ ಅಡಿಗ, ಪ್ರಥಮ್ಯ ಯು ವೈ ನೆಲ್ಯಾಡಿ, ಅಶ್ವಿನಿ ಐತಾಳ್ ಸಹಿತ ಸುಮಾರು 45 ಮಂದಿ ಕಲಾಪ್ರತಿಭೆಗಳು ಭಾಗವಹಿಸಿದ್ದರು. ಕಲಾವಿದರಿಗೆ ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಉಡುಪಿಯ ಪರ್ಯಾಯ ಪೀಠಾಧಿಪತಿ ಕೃಷ್ಣಾಪುರ ಮಠದ ಶ್ರೀಪಾದರು ಆಶೀರ್ವಚನ ನೀಡಿದರು.

.jpg)
