HEALTH TIPS

ಮಕ್ಕಳಿಗೆ ಸಂಸ್ಕøತಿಯ ಸಮೃದ್ಧತೆಯನ್ನು ಪರಿಚಯಿಸಬೇಕು: ಕ್ಯಾ.ಗಣೇಶ್ ಕಾರ್ಣಿಕ್: ಎಡನೀರು ಮಠದಲ್ಲಿ ಆಳ್ವಾಸ್ ನವದಿನ ಸಾಂಸ್ಕøತಿಕ ವೈಭವಕ್ಕೆ ಚಾಲನೆ

                ಬದಿಯಡ್ಕ : ವೇದಕಾಲದಲ್ಲಿ ಪ್ರಕೃತಿಯನ್ನೇ ಪೂಜಿಸಿಕೊಂಡಿದ್ದ ಭವ್ಯ ಪರಂಪರೆಯಿಂದ ನಾವು ಬಂದಿದ್ದೇವೆ. ನಮ್ಮ ಬದುಕಿಗೆ ಆಧಾರವಾದ ಎಲ್ಲಾ ವಿಚಾರಗಳನ್ನು ಅರಿತು ಅವರು ಆರಾಧನೆಯನ್ನು ಮಾಡುತ್ತಿದ್ದರು. ಅದನ್ನು ನಾವು ಮುಂದುವರಿಸಿಕೊಂಡು ಮಕ್ಕಳಿಗೆ ನಮ್ಮ ಸಂಸ್ಕøತಿಯ ಸಮೃದ್ಧತೆಯನ್ನು ಪರಿಚಯಿಸಬೇಕಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು. 

         ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ತೃತೀಯ ಚಾತುರ್ಮಾಸ್ಯ ವ್ರತಾಚರಣೆಯ ಸಂದಭರ್À 45ನೇ ದಿನ ಎಡನೀರು ಮಠದಲ್ಲಿ ಬುಧವಾರ ಆರಂಭವಾದ ಆಳ್ವಾಸ್ ನವದಿನ ಸಾಂಸ್ಕøತಿಕ ವೈಭÀವಕ್ಕೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು. 

          ನಮ್ಮೊಳಗಿರುವ ವಿಕಾರಗಳು ದೂರವಾಗಬೇಕಾದರೆ ಪರಂಪರೆಯ ಹೆಜ್ಜೆಗುರುತುಗಳನ್ನು ಅರ್ಥೈಸಿಕೊಳ್ಳುವ ಕಾಲಬರಬೇಕು. ನಮ್ಮ ಪರಂಪರೆಯ ಪರಿಚಯದೊಂದಿಗೆ ಮಕ್ಕಳು, ಮೊಮ್ಮಕ್ಕಳು ಹೇಗೆ ಬೆಳೆಯಬೇಕು ಎಂಬುದನ್ನು ನಾವು ನಿರ್ಧರಿಸಬೇಕು. ಹೆತ್ತವರಾಗಿ ಪೋಷಕರಾಗಿ ನಮ್ಮ ಜವಾಬ್ದಾರಿಯನ್ನು ಅರಿತು ಕರ್ತವ್ಯನಿರತರಾಗಬೇಕು. ಅತ್ಯಂತ ಶ್ರದ್ಧೆಯಿಂದ ನಮ್ಮ ಪರಂಪರೆಯತ್ತ ತಿರುಗಿ ನೋಡಿದರೆ ಆ ಕ್ಷಣದಲ್ಲಿ ಬದಲಾವಣೆ ಪ್ರಾರಂಭವಾಗುತ್ತದೆ. ಚಾತುರ್ಮಾಸ್ಯದ ಸಂದರ್ಭದಲ್ಲಿ ಸ್ವಾಮೀಜಿಯವರ ಪ್ರಯತ್ನದಿಂದ ಅತ್ಯುತ್ತಮ ಕಾರ್ಯಕ್ರಮಗಳು ಇಲ್ಲಿ ಮೂಡಿಬರುತ್ತಿದೆ. ಸಮಾಜವನ್ನು ಜೋಡಿಸುವ, ಸಂಸ್ಕøತಿಯನ್ನು ಪರಿಚಯಿಸುವ, ಕ್ಷೇತ್ರಗಳ ಜನರನ್ನು ಸೇರಿಸುವ ಅದ್ಭುತವಾದ ಕಾರ್ಯವನ್ನು ಪೂಜ್ಯ ಸ್ವಾಮೀಜಿಯವರು ಕೈಗೊಂಡಿದ್ದಾರೆ ಎಂದರು. 

             ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದಿವ್ಯಸಾನ್ನಿಧ್ಯವನ್ನು ವಹಿಸಿ ಆಶೀರ್ವಚನವನ್ನು ನೀಡಿ, ಸಂಸ್ಕಾರ, ಜಾಗೃತಿಯನ್ನು ಕಲೆ ತಂದುಕೊಡುತ್ತದೆ. ಮನಸ್ಸಿಗೆ ಸರಿಯಾದ ಸ್ವರೂಪವನ್ನು ನೀಡಲು ಸಂಸ್ಕಾರವಂತ ಕಲೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ನಮ್ಮ ದೇಶದ ಧಾರ್ಮಿಕತೆಗೆ ಇರುವಷ್ಟೇ ಮಹತ್ವ ನಮ್ಮ ದೇಶದ ಕಲೆಗಳಿಗೆ ಇದೆ. ಹಿಂದಿನ ಕಾಲದಲ್ಲಿಯೇ ಶ್ರೀಮಠದಲ್ಲಿ ಕಲೆಗೆ ವಿಶೇಷ ಸ್ಥಾನಮಾನವಿದೆ. ಅದು ಮುಂದುವರಿಯುತ್ತಾ ಇದೆ ಎಂದರು.

         ಶ್ರೀಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ನಿರೂಪಿಸಿದರು. ಕಲಾವಿದ, ಸಂಘಟಕ ರಮಣ್ ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ಬಳಿಕ ಸುಪ್ರಸಿದ್ಧ ಭರತನಾಟ್ಯ ಕಲಾವಿದೆ ಅಯನ ವಿ ರಮಣ್ ಅವರಿಂದ ಭರತನಾಟ್ಯ, ಹರಿದಾಸ ತೋನ್ಸೆ ಪುಷ್ಕಳ ಕುಮಾರ್ ಅವರಿಂದ ಹರಿಕಥೆ ಜರಗಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries