ಬದಿಯಡ್ಕ: ಸೇವಾಭಾರತಿ ನೀರ್ಚಾಲು ಘಟಕದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಜರಗಿತು. ವರದಿ ಹಾಗೂ ಲೆಕ್ಕಪತ್ರ ಮಂಡಿಸಲಾಯಿತು. 2023-24ನೇ ವರ್ಷಾವಧಿಗೆ 19 ಮಂದಿ ಪದಾಧಿಕಾರಿಗಳನ್ನು ಆರಿಸಲಾಯಿತು. ನೂತನ ಸಮಿತಿಗೆ ಅಧ್ಯಕ್ಷರಾಗಿ ಸದಾಶಿವ ಮಾಸ್ತರ್ ಬೇಳ, ಉಪಾಧ್ಯಕ್ಷರಾಗಿ ಶಶಿಧರನ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಜೊತೆಕಾರ್ಯದರ್ಶಿಯಾಗಿ ಶ್ರೀಜಿತ್ ಪುದುಕೋಳಿ, ಕೋಶಾಧಿಕಾರಿಯಾಗಿ ಬಾಲಸುಬ್ರಹ್ಮಣ್ಯ ಡಿ. ಆಯ್ಕೆಯಾದರು. ಸಂಜೆ 4.30ರಿಂದ 6 ಗಂಟೆಯವರೆಗೆ ನಡೆಯುವ ಉಚಿತ ಕೋಚಿಂಗ್ ನೀಡಲು ಕಟ್ಟಡ ನಿರ್ಮಿಸಲು ಸರ್ಕಾರಿ ಸ್ಥಳಕ್ಕಾಗಿ ಮನವಿ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಚಿಕಿತ್ಸೆಯಲ್ಲಿರುವ ಬಾಲಕೃಷ್ಣ ಮಣಿಯಾಣಿ ಮಲ್ಲಡ್ಕ ಇವರ ಕುಟುಂಬದ ದಯನೀಯ ಸ್ಥಿತಿಗೆ ನೆರವಾಗಿ ಹತ್ತುಸಾವಿರ ರೂ. ನೀಡಲು ತೀರ್ಮಾನಿಸಲಾಯಿತು.


