ಕಾಸರಗೋಡು: ವಿದ್ಯಾನಗರ ಸಿವಿಲ್ ಸ್ಟೇಶನ್‍ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ನೌಕರರ ನೇತೃತ್ವದಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ಉತ್ಸವದ ಅಂಗವಾಗಿ ವರ್ಣರಂಜಿತ ಹೂವಿನ ರಂಗೋಲಿ, ಮಾವೇಲಿಗೆ ಸ್ವಾಗತ, ತಿರುವಾತಿರ, ಇತರ ಕಲಾ ಸಾಂಸ್ಕ್ರತಿಕ ಕಾರ್ಯಕ್ರಮಗಳು, ಮಹಿಳೆಯರು ಮತ್ತು ಪುರುಷರಿಗೆ ಹಗ್ಗ ಎಳೆಯುವುದು, ಸುಂದರಿಗೆ ತಿಲಕವಿಡುವ ಸ್ಪರ್ಧೆ, ಓಣಂ ಔತಣಕೂಟ ನಡೆಯಿತು.
ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ) ಕೆ.ನವೀನ್ ಬಾಬು, ಸಹಾಯಕ ಜಿಲ್ಲಾಧಿಕಾರಿ ವಿ.ಎನ್.ದಿನೇಶ್ ಕುಮಾರ್, ಹುಜೂರ್ ಶಿರಸ್ತೇದಾರ್ ಡಿ.ರಂಜಿತ್, ಸಿಬ್ಬಂದಿ ಪರಿಷತ್ ಕಾರ್ಯದರ್ಶಿ ಪಿ.ಧನೇಶ್ ಕುಮಾರ್ ಉಪಸ್ಥಿತರಿದ್ದರು.


