HEALTH TIPS

ಭಾರತದಲ್ಲಿ 150 ಆನೆ ಕಾರಿಡಾರ್, ಪ.ಬಂಗಾಳದಲ್ಲಿ ಅಧಿಕ: ಪರಿಸರ ಸಚಿವಾಲಯದ ವರದಿ

                 ವದೆಹಲಿ: ದೇಶದಲ್ಲಿ ಕನಿಷ್ಠ 150 ಆನೆ ಕಾರಿಡಾರ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ ಗರಿಷ್ಠ 26 ಆನೆ ಕಾರಿಡಾರ್‌ಗಳನ್ನು ಹೊಂದಿರುವ ಪಶ್ಚಿಮ ಬಂಗಾಳ ಅಗ್ರಸ್ಥಾನದಲ್ಲಿದೆ ಎಂದು ಪರಿಸರ ಸಚಿವಾಲಯದ ವರದಿ ಹೇಳುತ್ತದೆ.

               ಈ 150 ಕಾರಿಡಾರ್‌ಗಳು 15 ರಾಜ್ಯಗಳ ನಾಲ್ಕು ಪ್ರದೇಶಗಳಲ್ಲಿ ವ್ಯಾಪಿಸಿವೆ ಎಂದು ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ 'ಭಾರತದ ಆನೆ ಕಾರಿಡಾರ್‌ಗಳು' ವರದಿಯಲ್ಲಿ ಹೇಳಲಾಗಿದೆ.

                 ಆದರೆ, 2010ರಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ 'ಆನೆ ಕಾರ್ಯಪಡೆ ವರದಿ'(ಗಜ ವರದಿ)ಯಲ್ಲಿ 88 ಕಾರಿಡಾರ್‌ಗಳನ್ನು ಪಟ್ಟಿ ಮಾಡಲಾಗಿತ್ತು.

                59 ಕಾರಿಡಾರ್‌ಗಳಲ್ಲಿ ಆನೆಗಳ ಚಲನವಲನ ಹೆಚ್ಚಿರುವುದು ಕಂಡುಬಂದಿದೆ. 29 ಕಾರಿಡಾರ್‌ಗಳಲ್ಲಿ ಯಥಾಸ್ಥಿತಿ ಕಂಡುಬಂದಿದ್ದರೆ, 29 ಕಾರಿಡಾರ್‌ಗಳಲ್ಲಿ ಕಡಿಮೆಯಾಗಿದೆ. 15 ಕಾರಿಡಾರ್‌ಗಳ ಪುನರುಜ್ಜೀವನ ಅಗತ್ಯವಿದ್ದರೆ, 18 ಕಾರಿಡಾರ್‌ಗಳ ಕುರಿತ ಮಾಹಿತಿ ಲಭ್ಯವಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

                    2017ರಲ್ಲಿನ ಅಂದಾಜಿನಂತೆ, ಭಾರತದಲ್ಲಿ 30 ಸಾವಿರದಷ್ಟು ಆನೆಗಳಿದ್ದವು. ಇದು ಜಗತ್ತಿನಲ್ಲಿರುವ ಒಟ್ಟು ಪ್ರಾಣಿಗಳ ಸಂಖ್ಯೆಯ ಶೇ 60ರಷ್ಟಾಗುತ್ತದೆ.

                  ಪರಿಸರ ಸಚಿವಾಲಯವು ರಾಜ್ಯಗಳ ಅರಣ್ಯ ಇಲಾಖೆಗಳ ಸಹಯೋಗದಲ್ಲಿ ಈ ವರದಿಯನ್ನು ಸಿದ್ಧಪಡಿಸಿದೆ. 15 ರಾಜ್ಯಗಳಲ್ಲಿರುವ ವಿಸ್ತರಿಸಿರುವ 150 ಆನೆ ಕಾರಿಡಾರ್‌ಗಳ ಸಮೀಕ್ಷೆ ನಡೆಸಿ, ವರದಿ ಸಿದ್ಧಪಡಿಸಲು ಎರಡು ವರ್ಷಗಳಷ್ಟು ಸಮಯ ಹಿಡಿದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries