ತಿರುವನಂತಪುರಂ: ಕೇರಳದಲ್ಲಿ ಸಂಚಾರ ಆರಂಭಿಸಿರುವ ಎರಡನೇ ವಂದೇಭಾರತ್ ಎಕ್ಸ್ ಪ್ರೆಸ್ ಕೂಡ ಜನಪ್ರಿಯತೆ ಗಳಿಸಿದೆ. ನಿನ್ನೆ ಕೂಡ ಟಿಕೆಟ್ ಕೊಳ್ಳಲು ಭಾರಿ ನೂಕು ನುಗ್ಗಲು ಉಂಟಾಗಿದೆ.
ಎಲ್ಲಾ ತರಗತಿಗಳ ಟಿಕೆಟ್‍ಗಳು ಐದು ದಿನಗಳವರೆಗೆ ಪೂರ್ಣ ಬುಕ್ಕಿಂಗ್ ಆಗಿದೆ. ಸೇವೆ ಆರಂಭವಾದಾಗಲೇ ಟಿಕೆಟ್ ಭರ್ತಿಯಾಗಿತ್ತು.
ಅಕ್ಟೋಬರ್ 1 ರವರೆಗೆ ತಿರುವನಂತಪುರಂ-ಕಾಸರಗೋಡು ವಂದೇಭಾರತ್ ಎಕ್ಸ್‍ಪ್ರೆಸ್‍ಗೆ ಮತ್ತು ಅಕ್ಟೋಬರ್ 2 ರವರೆಗೆ ಕಾಸರಗೋಡು-ತಿರುವನಂತಪುರಂ ವಂದೇಭಾರತ್ ಎಕ್ಸ್‍ಪ್ರೆಸ್‍ಗೆ ಟಿಕೆಟ್‍ಗಳು ಭರ್ತಿಯಾಗಿವೆ. ಎಸಿ ಕೋಚ್‍ಗಳಿಗಿಂತಲೂ ಎಕ್ಸಿಕ್ಯೂಟಿವ್ ಕೋಚ್‍ಗಳು ವೇಗವಾಗಿ ಬುಕ್ ಆಗಿದ್ದವು. ಆಲಪ್ಪುಳದ ಮೂಲಕ ಸೇವೆ ಮತ್ತು ಅನುಕೂಲದ ಸಮಯ ಎರಡನೇ ವಂದೇಭಾರತ್ ಎಕ್ಸ್‍ಪ್ರೆಸ್ ನ ಜನಪ್ರಿಯತೆಗೆ ಕೊಡುಗೆ ನೀಡಿದೆ.


