HEALTH TIPS

ಏಕಕಾಲಕ್ಕೆ 80 ಲಕ್ಷ ವೀಕ್ಷಣೆ, ಇಸ್ರೊಗೆ ಯುಟ್ಯೂಬ್ ಅಭಿನಂದನೆ

                ವದೆಹಲಿ: ಇಸ್ರೊ ಚಂದ್ರಯಾನ-3 ಅನ್ನು ಯಶಸ್ವಿಯಾಗಿಸಿದ್ದು ಇಡೀ ಭಾರತಕ್ಕೆ ಹೆಮ್ಮೆ ತಂದಿದೆ. ಆ.23ರಂದು ವಿಕ್ರಮ್‌ ಲ್ಯಾಂಡರ್‌ ಚಂದ್ರನ ಅಂಗಳಕ್ಕೆ ಇಳಿಯುವ ನೇರಪ್ರಸಾರವನ್ನು ಜನತೆಗೆ ಕಣ್ತುಂಬಿಕೊಳ್ಳುವ ಅವಕಾಶವನ್ನೂ ಸಂಸ್ಥೆ ನೀಡಿತ್ತು.

                   ವಿಕ್ರಮ್‌ ಲ್ಯಾಂಡರ್‌ನ ಲ್ಯಾಂಡಿಂಗ್‌ ವಿಡಿಯೊ ಯುಟ್ಯೂಬ್‌ನಲ್ಲಿ ಏಕಕಾಲದಲ್ಲಿ 80 ಲಕ್ಷ ಜನ ವೀಕ್ಷಣೆ ಗಳಿಸಿದೆ.

                ಈ ಮೂಲಕ ವಿಶ್ವ‌ದಲ್ಲೇ ಅತಿ ಹೆಚ್ಚು ಏಕಕಾಲದಲ್ಲಿ ವೀಕ್ಷಣೆಯಾದ ವಿಡಿಯೊ ಎಂಬ ಹೆಗ್ಗಳಿಕೆಯನ್ನು ಚಂದ್ರಯಾನ 3ರ ನೇರಪ್ರಸಾರದ ವಿಡಿಯೊ ಪಡೆದುಕೊಂಡಿದೆ.


                     ಈ ಹಿನ್ನೆಲೆಯಲ್ಲಿ ಯುಟ್ಯೂಬ್‌ ಮುಖ್ಯಸ್ಥ ನೀಲ್‌ ಮೋಹನ್‌ ಇಸ್ರೊಗೆ ಅಭಿನಂದನೆ ಹೇಳಿದ್ದಾರೆ.

                     ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, 'ಇದನ್ನು ನೋಡಲು ಖುಷಿಯಾಗುತ್ತಿದೆ, ಇಸ್ರೊ ತಂಡಕ್ಕೆ ಅಭಿನಂದನೆಗಳು. ಏಕಕಾಲಕ್ಕೆ 80 ಲಕ್ಷ ವೀಕ್ಷಣೆ ಸಾಮಾನ್ಯದ್ದಲ್ಲ' ಎಂದು ಬರೆದುಕೊಂಡಿದ್ದಾರೆ.

                'ವಾಹ್ ಎಂದು ಉದ್ಘರಿಸುವ ವಿಷಯಗಳಲ್ಲಿ ಇದೂ ಒಂದಾಗಿದೆ. ಭಾರತವು ಚಂದ್ರನ ಮೇಲೆ ಇಳಿದಿದೆ!' ಎಂದು ಯುಟ್ಯೂಬ್‌ ತನ್ನ ಪೋಸ್ಟ್‌ನಲ್ಲಿ ಖುಷಿಯ ಎಮೋಜಿಯೊಂದಿಗೆ ಹಂಚಿಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries