HEALTH TIPS

ಲಿಕ್ವಿಡ್‌ ಬಯೋಸ್ಪೈ: ಕ್ಯಾನ್ಸರ್‌ ರೋಗಿಗಳಿಗೆ ಈ ಟೆಸ್ಟ್ ವರದಾನ, ಏಕೆ?

 ಕ್ಯಾನ್ಸರ್ ಎಂಬ ಮಾರಾಣಾಂತಿಕ ಕಾಯಿಲೆ ವಿರುದ್ಧ ಲಕ್ಷಾಂತರ ರೋಗಿಗಳು ಹೋರಾಡುತ್ತಿದ್ದಾರೆ. ಕ್ಯಾನ್ಸರ್‌ ಕಾಯಿಲೆಯನ್ನು ಪ್ರಾರಂಭದ ಹಂತದಲ್ಲಿಯೇ ಗುರುತಿಸಿದರೆ ಚಿಕಿತ್ಸೆ ನೀಡಿ ಗುಣಪಡಿಸುವುದು ಸುಲಭವಾಗುವುದು. ಕ್ಯಾನ್ಸರ್ ಅನ್ನು ಪ್ರಾರಂಭದ ಹಂತದಲ್ಲಿಯೇ ಗುರುತಿಸಲು ಲಿಕ್ವಿಡ್ ಬಯೋಸ್ಪೈ ಸಹಾಯ ಮಾಡುತ್ತದೆ. ಲಿಕ್ವಿಡ್‌ ಬಯೋಸ್ಪೈ ಎಂದರೇನು? ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೇಗೆ ಸಹಾಯ ಮಾಡುತ್ತದೆ ಎಂದು ನೋಡೋಣ ಬನ್ನಿ:

ಲಿಕ್ವಿಡ್‌ ಬಯೋಸ್ಪೈ ಎಂದರೇನು?
ಇದೊಂದು ಮೆಡಿಕಲ್ ಟೆಸ್ಟ್ ಆಗಿದ್ದು ಇದು ದೇಹದಲ್ಲಿನ ದ್ರವ, ರಕ್ತ, ಕ್ಯಾನ್ಸರ್ ಗಡ್ಡೆ. ಸೆಲ್‌ ಫ್ರೀ ಡಿಎನ್‌ಎ (cfDNA) ಅಥವಾ microRNA ಇವುಗಳ ಪರೀಕ್ಷೆ ಮಾಡಿ ಕ್ಯಾನ್ಸರ್‌ ಇದೆಯೇ ಎಂಬುವುದನ್ನು ಪರೀಕ್ಷೆ ಮಾಡಲು ಈ ಲಿಕ್ವಿಡ್‌ ಬಯೋಸ್ಪೈ ಸಹಾಯ ಮಾಡುತ್ತದೆ.

ಲಿಕ್ವಿಡ್‌ ಬಯೋಸ್ಪೈ ಪ್ರಯೋಜನವೇನು?
ಈ ಲಿಕ್ವಿಡ್‌ ಸ್ಪೈಯಿಂದ ಕ್ಯಾನ್ಸರ್ ಅನ್ನು ಪ್ರಾರಂಭದ ಹಂತದಲ್ಲಿ ಗುರುತಿಸಲು ಸಹಾಯವಾಗುವುದು. ಈ ಲಿಕ್ವಿಡ್‌ ಅಟೋಸ್ಪೈ ಕ್ಯಾನ್ಸರ್ ಲಕ್ಷಣಗಳು ಕಾಣುವ ಮೊದಲೇ ಪತ್ತೆಹಚ್ಚಲು ಸಹಾಯವಾಗುವುದು. ಇದರಿಂದ ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖವಾಗಬಹುದು.

ಈ ಲಿಕ್ವಿಡ್‌ ಬಯೋಸ್ಪೈನಲ್ಲಿ ಬಯೋಸ್ಪೈನಲ್ಲಿ ಸರ್ಜಿಕಲ್‌ ಪ್ರೊಸಿಜರ್ ಮಾಡುವಂತಿಲ್ಲ, ಲಿಕ್ವಿಡ್‌ ಬಯೋಸ್ಪೈನಲ್ಲಿ ದೇಹದಿಂದ ರಕ್ತದ ಸ್ಯಾಂಪಲ್‌ ತೆಗೆದು ಪರೀಕ್ಷೆ ಮಾಡಿ ಕ್ಯಾನ್ಸರ್ ಇದೆಯೇ ಎಂದು ತಿಳಿಯಲಾಗುವುದಿಲ್ಲ. ಹೀಗೆ ಮಾಡುವುದರಿಂದ ರೋಗಿಗೆ ಹೆಚ್ಚಿನ ತೊಂದರೆ, ಕಿರಿಕಿರಿ ಉಂಟಾಗುವುದನ್ನು ತಡೆಗಟ್ಟಬಹುದು.

ವಂಶವಾಹಿನಿಯಾಗಿ ಕಾಯಿಲೆ ಬರುವ ಸಾಧ್ಯತೆ ಇದೆಯೇ ಎಂದು ಪತ್ತೆ ಹಚ್ಚಲು ಸಹಾಯವಾಗುವುದು
ಕ್ಯಾನ್ಸರ್ ಕಾಯಿಲೆ ವಂಶವಾಹಿಯಾಗಿ ಬರುವ ಸಾಧ್ಯತೆ ಕೂಡ ಇರುತ್ತದೆ. ವಂಶವಾಹಿಯಾಗಿ ಕ್ಯಾನ್ಸರ್‌ ಬರುವ ಸಾದ್ಯತೆ ಇದೆಯೇ ಎಂದು ತಿಳಿಯಲು ಈ ಲಿಕ್ವಿಡ್‌ ಬಯೋಸ್ಪೈ ಸಹಾಯ ಮಾಡುತ್ತದೆ.

ಕಾಯಿಲೆ ಹೆಚ್ಚಾಗುವುದನ್ನು ತಡೆಗಟ್ಟಲು ಸಹಕಾರಿ
ಲಿಕ್ವಿಡ್‌ ಬಯೋಸ್ಪೈ ರಕ್ತನಾಳದಲ್ಲಿ ಅಥವಾ ಡಿಎನ್‌ಎದಲ್ಲಿ ಕ್ಯಾನ್ಸರ್‌ ಕಣಗಳು ಇವೆಯೇ ಎಂದು ಆರಂಭದಲ್ಲಿಯೇ ಪತ್ತೆಹಚ್ಚಲು ನೆರವಾಗುವುದು. ಇದರಿಂದ ಕ್ಯಾನ್ಸರ್‌ ಕಣಗಳನ್ನು ಆರಂಭದಲ್ಲಿ ನಾಶ ಪಡಿಸಲು ಸಹಾಯವಾಗುವುದು.

ಕ್ಯಾನ್ಸರ್‌ ಇದೆ ಎಂದು ತಿಳಿಯುವುದು ಹೇಗೆ?
ದೈಹಿಕ ಪರೀಕ್ಷೆ ಮಾಡಲಾಗುವುದು: ವೈದ್ಯರು ರೋಗಿಯ ದೇಹವನ್ನು ಪರೀಕ್ಷೆ ಮಾಡಿದಾಗ ಗಡ್ಡೆಗಳು ಕಂಡು ಬಂದರೆ ಅಥವಾ ತ್ವಚೆಯಲ್ಲಿ ಬದಲಾವಣೆ ಕಂಡು ಬಂದರೆ ಕ್ಯಾನ್ಸರ್ ಪರೀಕ್ಷೆ ಮಾಡಿಸುವಂತೆ ಸೂಚಿಸುತ್ತಾರೆ.

ಲ್ಯಾಬ್‌ ಟೆಸ್ಟ್: ಲ್ಯಾಬ್‌ನಲ್ಲಿ ರಕ್ತದ ಸ್ಯಾಂಪಲ್ ತೆಗೆದು ಪರೀಕ್ಷೆ ಮಾಡಲಾಗುವುದು. ಈ ರೀತಿ ಪರೀಕ್ಷೆ ಮಾಡಿದಾಗ ಬಿಳಿ ರಕ್ತಕಣಗಳಲ್ಲಿ ಅಸಹಜತೆ ಕಂಡು ಕಂಡು ಬಂದರೆ ಕ್ಯಾನ್ಸರ್ ಇದೆ ಎಂದು ವೈದ್ಯರು ನಿರ್ಧರಿಸುತ್ತಾರೆ.

ಈ ಪರೀಕ್ಷೆಗಳನ್ನು ಮಾಡಲಾಗುವುದು
ಸಿಟಿ ಸ್ಕ್ಯಾನ್‌
ಬೋನ್‌ ಸ್ಕ್ಯಾನ್‌,
ಎಂಆರ್‌ಐ ಸ್ಕ್ಯಾನ್,
ಪೊಸಿಸನ್ ಎಮಿಷನ್ ಟೋಮೋಗ್ರಫಿ ಸ್ಕ್ಯಾನ್
ಅಲ್ಟ್ರಾಸೌಂಟ್‌ ಸ್ಕ್ಯಾನ್‌
ಎಕ್ಸ್‌ ರೇ
ಬಯೋಸ್ಪೈ: ಬ್ಲಡ್‌ ಸ್ಯಾಂಪಲ್‌ ಕಲೆಕ್ಟ್‌ ಮಾಡಿ ಕ್ಯಾನ್ಸರ್‌ ಕಣಗಳು ಇವೆಯೇ ಎಂದು ಪರೀಕ್ಷೆ ಮಾಡಿ ತಿಳಿಯಲಾಗುವುದು.

ಕ್ಯಾನ್ಸರ್‌ ಕಣಗಳನ್ನು ಪ್ರಾರಂಭದಲ್ಲಿಯೇ ಗುರುತಿಸುವುದರಿಂದ ದೊರೆಯುವ ಪ್ರಯೋಜನಗಳೇನು?
* ಕ್ಯಾನ್ಸರ್ ಕಣಗಳನ್ನು ಪ್ರಾರಂಭದಲ್ಲಿಯೇ ಗುರುತಿಸಿದರೆ ಚಿಕಿತ್ಸೆ ತುಂಬಾನೇ ಫಲಕಾರಿಯಾಗುವುದು
* ಮೊದಲ ಹಂತದಲ್ಲಿಯೇ ಗುರುತಿಸಿದರೆ ಕ್ಯಾನ್ಸರ್‌ ಕಣಗಳನ್ನು ಸಂಪೂರ್ಣ ನಾಶವಾಗುವುದು
* ಕ್ಯಾನ್ಸರ್ ಕಣಗಳು ದೇಹದ ಇತರ ಭಾಗಕ್ಕೆ ಹರಡುವುದನ್ನು ತಡೆಗಟ್ಟಲು ಸಹಕಾರಿಯಾಗುವುದು.
* ಪ್ರಾರಂಭದ ಹಂತದಲ್ಲಿಯೇ ಚಿಕಿತ್ಸೆ ಪಡೆಯುವುದರಿಂದ ಗುಣಮುಖರಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries