HEALTH TIPS

ಮಂಜೇಶ್ವರ: ಒಂದೂವರೆ ತಿಂಗಳ ಮಗುವನ್ನು ಕೆಸರಿನಲ್ಲಿ ಮುಳುಗಿಸಿ ಕೊಲೆ; ತಾಯಿಯ ವಿರುದ್ಧ ಆರೋಪ

             ಮಂಜೇಶ್ವರ : ಒಂದೂವರೆ ತಿಂಗಳ ಮಗುವನ್ನು ತಾಯಿಯೇ ಕೆಸರಿನಲ್ಲಿ ಮುಳುಗಿಸಿ ಕೊಲೆಗೈದಿದ್ದಾಳೆ ಎನ್ನಲಾದ ದಾರುಣ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯ ಉಪ್ಪಳದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

           ಸುಮಂಗಲಿ - ಸತ್ಯನಾರಾಯಣ ದಂಪತಿಯ ಒಂದೂವರೆ ತಿಂಗಳ ಮಗು ಮೃತಪಟ್ಟಿದೆ.

ತಾಯಿ ಮತ್ತು ಮಗು ನಾಪತ್ತೆಯಾದುದರಿಂದ ಮನೆಯವರು ಶೋಧ ನಡೆಸಿದಾಗ ತಾಯಿಯನ್ನು ಮನೆಯ ಅಲ್ಪ ದೂರದಿಂದ ಪತ್ತೆ ಹಚ್ಚಲಾಗಿದ್ದು, ಮಗು ನಾಪತ್ತೆಯಾಗಿತ್ತು. ವಿಚಾರಿಸಿದಾಗ ಮಗುವನ್ನು ಕೆಸರಿನಲ್ಲಿ ಮುಳುಗಿಸಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾಳೆ ಎಂದು ದೂರಲಾಗಿದೆ. ಕೂಡಲೇ ಮಗುವನ್ನು ಮೇಲಕ್ಕೆತ್ತಿ ಉಪ್ಪಳದ ಮಂಗಲ್ಪಾಡಿ ಆಸ್ಪತ್ರೆಗೆ ತಲುಪಿಸಿದರೂ ಆಗಲೇ ಮಗು ಮೃತಪಟ್ಟಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

                ಮಂಜೇಶ್ವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆಯನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries