ಕಾಸರಗೋಡು : ಲೋಕೋಪಯೋಗಿ ಇಲಾಖೆ ರಸ್ತೆ ವಿಭಾಗ ವ್ಯಾಪ್ತಿಯ ಕೋಟೆಕಣಿ ರಸ್ತೆಯ ಕಿ.ಮೀ 0/030ರಲ್ಲಿ ಬರುವ ಕಿರುಸೇತುವೆ ಅತುಯಂತ ಶಿಥಿಲಾವಸ್ಥೆಯಲ್ಲಿರುವ ಹಿನ್ನೆಲೆಯಲ್ಲಿ ಸೆ. 27ರಿಂದ)ಈ ಹಾದಿಯಾಗಿ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಬದಿಯಡ್ಕ ಭಾಗದಿಂದ ಬರುವ ವಾಹನಗಳು ಕೋಟೆಕಣಿ ಜಂಕ್ಷನ್‍ನಿಂದ ಬಲಭಾಗಕ್ಕೆ ಮಧೂರು ಪಟ್ಲ ಕೊಳ್ಳಂಗಾನ ರಸ್ತೆ ಮೂಲಕ ಹಾಗೂ ಕಾಸರಗೋಡು ಕಡೆಯಿಂದ ಬರುವ ವಾಹನಗಳು ಮಧೂರು ದೇವಾಲಯ ತಲುಪುವುದಕ್ಕಿಂತ ಮೊದಲು ಎಡಭಾಗಕ್ಕೆ ಮಧೂರು-ಪಟ್ಲ ಕೊಲ್ಲಂಗಾನ ರಸ್ತೆ ಮೂಲಕ ಪಟ್ಲ ಕೊಳ್ಳಂಗಾನ ರಸ್ತೆ ಮೂಲಕ ಸಾಗಬೇಕು ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



.jpeg)
