ಮಂಜೇಶ್ವರ: ಚಿಗುರುಪಾದೆ ಶ್ರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಿಂಹ ಮಾಸದ ನಿಮಿತ್ತ ನಡೆಯುತ್ತಿರುವ ಶನಿವಾರ ಬಲಿವಾಡುಕೂಟ ಸಂದರ್ಭ ಜರಗಿದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಶ್ರೀಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದಿಂದ ಯಕ್ಷಗಾನ ತಾಳಮದ್ದಳೆ ‘ಸತ್ವ ಪರೀಕ್ಷೆ’ ಜನಮನ ರಂಜಿಸಿತು.
ಹಿಮ್ಮೇಳದಲ್ಲಿ ಭಾಗವತರಾಗಿ ವಿಶ್ವಾಸ್ ಭಟ್ ಕರ್ಬೆಟ್ಟು, ಕು. ನಂದನ ಮಾಲೆಂಕಿ, ಚೆಂಡೆ-ಮದ್ದಳೆಯಲ್ಲಿ ನಾರಾಯಣ ಶರ್ಮ ಹಾಗೂ ಕು. ವಂದನ ಮಾಲೆಂಕಿ ಪಾಲ್ಗೊಂಡಿದ್ದರು. ಅರ್ಥಧಾರಿಗಳಾಗಿ ಗುರುರಾಜ ಹೊಳ್ಳ ಬಾಯಾರು(ಶ್ರೀಕೃಷ್ಣ), ವೇಣುಗೋಪಾಲ ಮಜಿಬೈಲು(ಸುಭದ್ರೆ), ರಾಜಾರಾಮ ರಾವ್ ಮೀಯಪದವು(ಅರ್ಜುನ), ಯೋಗೀಶ ರಾವ್ ಚಿಗುರುಪಾದೆ(ಬಲರಾಮ), ಅವಿನಾಶ ಹೊಳ್ಳ ವರ್ಕಾಡಿ(ಭೀಮ), ವೇದಮೂರ್ತಿ ಗಣೇಶ ನಾವಡ ಮೀಯಪದವು(ಶಿವ),ಕು.ವಿಷ್ಣುಪ್ರಿಯ ನಾವಡ ಮಜಿಬೈಲು(ದಾರುಕ) ಭಾಗವಹಿಸಿದ್ದರು.