ಮಂಜೇಶ್ವರ: ದೈಗೋಳಿ ಶ್ರೀರಾಮಕೃಷ್ಣ ಭಜನಾ ಮಂದಿರದಲ್ಲಿ ಸೆಪ್ಟೆಂಬರ್ 6 ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಭಜನಾ ಕಾರ್ಯಕ್ರಮ, ವೇದಮೂರ್ತಿ ಬೋಳಂತಕೋಡಿ ರಾಮ ಭಟ್ಟರ ನೇತೃತ್ವದಲ್ಲಿ ಕೃμÁ್ಣಷ್ಟಮಿ ಪೂಜೆ ಹಾಗೂ ಸೆ. 10 ರಂದು ಬಾಲಗೋಕುಲದ ವಾರ್ಷಿಕೋತ್ಸವ ವಿಜೃಂಭಣೆಯಿಂದ ಜರಗಿತು.
ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ದೈಗೋಳಿ ದೀಪ ಪ್ರಜ್ವಲಿಸುವ ಮೂಲಕ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಸಂಜೆ 6 ಕ್ಕೆ ಮಂದಿರದ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್ ಬೋಳ್ನ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ವೇದಮೂರ್ತಿ ಬೋಳಂತಕೋಡಿ ರಾಮ ಭಟ್ ಧಾರ್ಮಿಕ ಕೇಂದ್ರಗಳ ಮಹತ್ವವನ್ನು ತಿಳಿಸಿದರು. ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಧಾರ್ಮಿಕ ನೇತಾರ ಮುರಳೀಧರ ಯಾದವ್ ಕುಂಬಳೆ, ಜಿಲ್ಲಾ ಪಂಚಾಯತಿ ಸದಸ್ಯೆ ಕಮಲಾಕ್ಷಿ ವಿನೋದ್, ನಿವೃತ್ತ ಬ್ಯಾಂಕ್ ಪ್ರಬಂಧಕ ಲಕ್ಷ್ಮಣ ಶೆಟ್ಟಿಗಾರ್ ಬೋಳ್ನ ತೂಮಿನಾಡು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಕೃಷ್ಣಪ್ಪ ಪೂಜಾರಿ, ದೇವಪ್ಪ ಪೂಜಾರಿ ತಾಳಿಪಡ್ಪು ಮುಂಬಯಿ, ಯುವ ಉದ್ಯಮಿ ಪ್ರಜ್ವಿತ್ ಶೆಟ್ಟಿ ಸುಳ್ಯಮೆ ಶುಭ ಹಾರೈಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬ್ಲಾಕ್ ಮಟ್ಟದಲ್ಲಿ ಉತ್ತಮ ಅಂಗನವಾಡಿ ಶಿಕ್ಷಕಿಯಾಗಿ ಆಯ್ಕೆಯಾದ ವಿಶಾಲಾಕ್ಷಿ ಹಾಗೂ ಬಾಲಗೋಕುಲ ಮಾತಾಶ್ರೀ ಕುಮಾರಿ ಯಜ್ಞಶ್ರೀ ಅವರನ್ನು ಶಾಲು ಹೊದೆಸಿ ಗೌರವಿಸಲಾಯಿತು. ಮಂದಿರದ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್ ಪಾರೆಕುಂಡಡ್ಕ ಸ್ವಾಗತಿಸಿ, ಶಂಕರನಾರಾಯಣ ಭಟ್ ಸಾದಂಗಯ ವಂದಿಸಿದರು. ಕಿರಣ್ ಧರ್ಮನಗರ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಧನ್ಯ ದೈಗೋಳಿ ಹಾಗೂ ಕುಮಾರಿ ಶ್ರುತಿಕ ದೈಗೋಳಿ ಪ್ರಾರ್ಥನೆ ಹಾಡಿದರು.