HEALTH TIPS

ಕುಲಾಲ ಸಂಘ ಪೈವಳಿಕೆ ಶಾಖೆ ಮಹಾಸಭೆ

                     ಉಪ್ಪಳ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಪೈವಳಿಕೆ ಶಾಖೆಯ 19 ನೇ ಮಹಾಸಭೆ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಇತ್ತೀಚೆಗೆ ಕುಲಾಲ ಸಮಾಜ ಮಂದಿರ ಕಾಯರ್‍ಕಟ್ಟೆ ಯಲ್ಲಿ ಜರಗಿತು. ಬೆಳಗ್ಗೆ 9 ರಿಂದ ಶ್ರೀಸತ್ಯನಾರಾಯಣ ಪೂಜೆ, ಮಹಾ ಮಂಗಳರಾತಿ, ಪ್ರಸಾದ ವಿತರಣೆ ನಂತರ ಮಹಾಸಭೆ, ಸಾಧಕರಿಗೆ ಗೌರವಾರ್ಪಣೆ, ಅನ್ನ ಸಂತರ್ಪಣೆ, ಪ್ರತಿಭಾ ಕಾರಂಜಿ, ಯಕ್ಷಗಾನ ಬಯಲಾಟ ನಡೆಯಿತು.    

            ಮುಳಿಯದ ಶ್ರೀ ವೈಷ್ಣವಿ ಕ್ಷೇತ್ರದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಕುಲಾಲ ಸಂಘ ಪೈವಳಿಕೆ ಶಾಖೆ ಅಧ್ಯಕ್ಷ ಬಾಬು ಮೂಲ್ಯ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಕುಲಾಲ ಸಂಘ ಬೆಂಗಳೂರು ಅಧ್ಯಕ್ಷ ವಿಠಲ ಕಣ್ಣೀರು ತೋಟ, ಕರ್ನಾಟಕ ಸರ್ಕಾರದ ನಿವೃತ್ತ ಅಧಿಕಾರಿ ಆನಂದ ಪೆರ್ಮುದೆ, ಉದ್ಯಮಿ ಉಮೇಶ್ ಇಡಿಯಾಳ, ಕೊಲ್ಯ ಕುಲಾಲ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸುಲೋಚನಾ ಟೀಚರ್ ಬಜಾಲ್, ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ರವೀಂದ್ರ ಮುನ್ನಿಪ್ಪಾಡಿ, ಸಹಕಾರ ಬ್ಯಾಂಕ್ ನಿವೃತ್ತ ಉದ್ಯೋಗಿ ಮುಂಡಪ್ಪ ಮೂಲ್ಯ ಕೊಮ್ಮಂಗಳ ಭಾಗವಹಿಸಿದರು. ಜಿಲ್ಲಾ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಬಾಲಕೃಷ್ಣ ದೀಕ್ಷಾ ಕುಂಜತ್ತೂರು, ಜಿಲ್ಲಾ ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್ ಕಬ್ಬಿನಹಿತ್ಲು, ಲೀಲಾವತಿ ಪೆರ್ಮುದೆ, ಶೀನ ಮಾಸ್ತರ್ ಕೋರಿಕ್ಕಾರ್, ರಾಮ ಮೂಲ್ಯ ಅಂಗಡಿಮಾರು, ಚರಣ್ ಕುಮಾರ್ ಚಿಪ್ಪಾರು,  ಸೀತಾರಾಮ ಕುಲಾಲ್ ಅಂಗಡಿಮಾರು, ದೇವು ಮೂಲ್ಯ ಕೊಮ್ಮಂಗಳ, ಪೂವಪ್ಪ ಸಾಲ್ಯಾನ್ ಮುನ್ನಿಪ್ಪಾಡಿ, ಐತಪ್ಪ ಮಾಸ್ತರ್ ಬಂಗಲೆ, ನಾಗೇಶ್ ಕೋಡಂದೂರು, ನಾರಾಯಣ ಗೋಳಿಮೂಲೆ, ಶ್ರೀಧರ್ ಬದಿಯಾರ್ ಗೌರವ ಉಪಸ್ಥಿತರಿದ್ದರು. ಸಾಧಕರಾದ ಎಂ. ಟಿ. ಯಸ್. ಕುಲಾಲ್, ಡಾ. ಹರೀಶ್ ಬೊಟ್ಟಾರಿ,  ಡಾ. ಯೋಗೀಶ್ ಮಂಡೆಕಾಪು, ಚಂದಪ್ಪ ಮೂಲ್ಯ ಕಾಯರ್‍ಕಟ್ಟೆ, ಪ್ರಜ್ಞಾ ಬದಿಯಾರು ಇವರುಗಳಿಗೆ ಗೌರವಾರ್ಪಣೆ ನಡೆಯಿತು. ಪೈವಳಿಕೆ ಕುಲಾಲ ಪಂಚಾಯತಿ ವ್ಯಾಪ್ತಿಯ ಮಕ್ಕಳಿಗೆ ಪುಸ್ತಕ ವಿತರಣೆ ಹಾಗೂ 2022-23ನೇ ವಿದ್ಯಾಭ್ಯಾಸ ವರ್ಷದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಎಸ್. ಎಸ್. ಎಲ್. ಸಿ ಮತ್ತು ಪಿಯುಸಿ, ಪ್ಲಸ್ ಟು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ರಾಮಚಂದ್ರ ಪಿಲಿಂಗುರಿ ವರದಿ ವಾಚಿಸಿ, ಜಯಂತ ಚಿಪ್ಪಾರ್ ಲೆಕ್ಕ ಪತ್ರ ಮಂಡಿಸಿದರು. ಸದಾನಂದ ಚಿಪ್ಪಾರ್ ಸ್ವಾಗತಿಸಿ, ಯಶವಂತ ದಳಿಕುಕ್ಕು ವಂದಿಸಿದರು. ನವೀನ್ ಚಿಪ್ಪಾರ್ ಕಾರ್ಯಕ್ರಮ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries