ಥೈರಾಯ್ಡ್ ಹಾರ್ಮೋನ್ ಸಮಸ್ಯೆ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಥೈರಾಯ್ಡ್ ಹಾರ್ಮೋನ್ ಎಂಬುವುದು ಚಯಪಚಯ ಕ್ರಿಯೆ ಸರಿಯಾಗಿ ಕಾರ್ಯ ನಿರ್ವಹಿಸಲು, ಇತರ ಅಂಗಾಂಗಗಲು ಸರಿಯಾಗಿ ಕಾರ್ಯ ನಿರ್ವಹಿಸಲು ತುಂಬಾನೇ ಅವಶ್ಯಕ. ಥೈರಾಯ್ಡ್ ಹಾರ್ಮೋನ್ ನಿಗದಿತ ಪ್ರಮಾಣಗಿಂತ ಕಡಿಮೆ ಉತ್ಪತ್ತಿಯಾದರೆ ಹೈಪೋಥೈರಾಯ್ಡ್ ಸಮಸ್ಯೆ ಉಂಟಾಗುವುದು. ಹೈಪೋಥೈರಾಯ್ಡ್ ಸಮಸ್ಯೆ ಉಂಟಾದರೆ ಮೈ ತೂಕ ತುಂಬಾನೇ ಹೆಚ್ಚಾಗುವುದು. ಎಷ್ಟೇ ಪ್ರಯತ್ನ ಮಾಡಿದರೂ ಮೈ ತೂಕ ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ.
ಹೈಪೋಥೈರಾಯ್ಡ್ ಸಮಸ್ಯೆ ಇರುವವರು ಮೈ ತೂಕ ಕಡಿಮೆ ಮಾಡಲು ಈ ಕೆಳಗಿನ ಟಿಪ್ಸ್ ಸಹಕಾರಿಯಾದೀತು ನೋಡಿ:
* ನಿಮ್ಮ ದೇಹದ ಮಾತು ಕೇಳಿ
ಬೇರೆಯವರಿಗೆ ವರ್ಕ್ ಆಗಿರುವುದು ನಿಮಗೆ ವರ್ಕ್ ಆಗುತ್ತೆ ಎಂದು ಹೇಳಲು ಸಾಧ್ಯವಿಲ್ಲ, ಆದ್ದರಿಂದ ನಿಮ್ಮ ದೇಹದ ಮಾತು ಕೇಳಿ. ನಿಮ್ಮ ದೇಹದ ಮಾತುಗಳನ್ನು ಕೇಳಿ. ನಿಮ್ಮ ದೇಹವನ್ನು ತುಂಬಾನೇ ದಂಡಿಸಬೇಡಿ.
ಪೋಷಕಾಂಶವಿರುವ ಆಹಾರ ಹೆಚ್ಚಾಗಿ ಸೇವಿಸಿ
ನೀವು ಪೋಷಕಾಂಶವಿರುವ ಆಹಾರದ ಕಡೆಗೆ ಗಮನಹರಿಸಬೇಕು. ಕಾರ್ಬ್ಸ್ ಹಾಗೂ ಸಕ್ಕರೆಯಂಶವಿರುವ ಆಹಾರವನ್ನು ಸೇವಿಸುವುದನ್ನು ಕಡಿಮೆ ಮಾಡಿ. ಅತ್ಯಧಿಕ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರ ಸೇವಿಸಬೇಡಿ. ಆರೋಗ್ಯಕರ ಕ್ಯಾಲೋರಿ ಇರುವ ಆಹಾರ ಸೇವಿಸಿ.
ಆಹಾರವನ್ನು ಸ್ವಲ್ಪ-ಸ್ವಲ್ಪವಾಗಿ ಸೇವಿಸಿ
ಹೈಪೋಥೈರಾಯ್ಡ್ ಸಮಸ್ಯೆ ಇರುವವರಿಗೆ ಇತರರಿಗಿಂತ ತುಂಬಾ ನಿಧಾನ ಜೀರ್ಣವಾಗುವುದು. ತುಂಬಾ ಆಹಾರ ಸೇವಿಸಿದರೆ ಜೀರ್ಣವಾಗಲು ತುಂಬಾನೇ ಸಮಯ ತೆಗೆದುಕೊಳ್ಳುತ್ತದೆ. ಇದರ ಬದಲಿಗೆ ನೀವು ಸ್ವಲ್ಪ -ಸ್ವಲ್ಪ ಆಹಾರದಂತೆ ಸೇವಸಿದರೆ ಜೀರ್ಣಕ್ರಿಯೆಗೆ ಸಹಕಾರಿ. ಉದಾಹರಣೆಗೆ ನೀವು 3 ದೋಸೆ ತಿನ್ನುವುದಾದರೆ ಒಂದೂವರೆ ದೋಸೆ ತಿಂದು 2 ಗಂಟೆಯ ನಂತರ ಮತ್ತೆ ಸ್ವಲ್ಪ ಆಹಾರ ಸೇವಿಸಿ. ಹೀಗೆ ಆಹಾರವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸುವುದರಿಂದ ತೂಕವನ್ನು ನಿಯಂತ್ರಿಸಬಹುದು.
ಈ ಬಗೆಯ ಆಹಾರ ಸೇವಿಸಿ
* ಹಣ್ಣುಗಳನ್ನು ಸೇವಿಸಿ
* ಸಿಹಿ ಗೆಣಸು, ಆಲೂಗಡ್ಡೆ, ಬಟಾಣಿ ನಿಮ್ಮ ಆಹಾರಕ್ರಮದಲ್ಲಿ ಸೇವಿಸಿ
* ಮೊಟ್ಟೆ, ಮೀನು, ಮಾಂಸಾಹಾರ ಸೇವಿಸಿ
* ಆರೋಗ್ಯಕರವಾದ ಕೊಬ್ಬಿನಂಶವಾದ ಆಲೀವ್ ಎಣ್ಣೆ, ಬೆಣ್ಣೆ ಹಣ್ಣು, ತೆಂಗಿನೆಣ್ಣೆ, ಮೊಸರು ಈ ಬಗೆಯ ಆಹಾರವನ್ನು ಆಹಾರಕ್ರಮದಲ್ಲಿ ಸೇರಿಸಿ
* ಕೆಂಪಕ್ಕಿ, ಓಟ್ಸ್, ನವಣೆ ಈ ಬಗೆಯ ಆಹಾರ ಒಳ್ಳೆಯದು
* ಅರಿಶಿಣ, ಕಾಳುಮೆಣಸು, ಸಾಸಿವೆ, ಕೇಸರಿ ಈ ಬಗೆಯ ಆಹಾರ ಸೇವಿಸಿ
* ಸಕ್ಕರೆ ಹಾಕದ ಕಾಫಿ, ಟೀ ಕುಡಿಯಿರಿ.
ವ್ಯಾಯಾಮ ಮಾಡಿ
ಪ್ರತಿದಿನ ವ್ಯಾಯಾಮ ಮಾಡಿ ಇದರಿಂದ ಥೈರಾಯ್ಡ್ ಹಾರ್ಮೋನ್‌ಗಳು ನಿಯಂತ್ರಣಕ್ಕೆ ಬರುತ್ತದೆ, ಮೈ ತೂಕ ಕೂಡ ಕಡಿಮೆಯಾಗುವುದು. ವ್ಯಾಯಾಮವನ್ನು ಮಾಡುವ ಹೆಸರಿನಲ್ಲಿ ದೇಹವನ್ನು ತುಂಬಾನೇ ದಂಡಿಸಬೇಡಿ. ನಿಮ್ಮ ದೇಹದ ಮಾತು ಕೇಳಿ, ಮಿತಿಯಲ್ಲಿ ವ್ಯಾಯಾಮ ಮಾಡಿ. ಯೋಗಾಸನ ಅಭ್ಯಾಸ ಮಾಡುವುದರಿಂದ ಮೈ ತೂಕ ನಿಯಂತ್ರಣದಲ್ಲಿಡಲು ತುಂಬಾನೇ ಸಹಕಾರಿ.
ಥೈರಾಯ್ಡ್ ಹಾರ್ಮೋನ್ ನಿಯಂತ್ರಣಕ್ಕೆ ಔಷಧಿಯನ್ನು ಸರಿಯಾಗಿ ತೆಗೆದುಕೊಳ್ಳಿ
ಥೈರಾಯ್ಡ್ ಮಾತ್ರೆಯನ್ನು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿ. ಸಾಕಷ್ಟು ನೀರು ಕುಡಿಯಿರಿ. ಇದರ ಜೊತೆಗೆ ಬೇರೆ ಔಷಧಿಯನ್ನು ತೆಗೆದುಕೊಳ್ಳಬೇಡಿ. ಥೈರಾಯ್ಡ್ ಮಾತ್ರೆ ತೆಗೆದುಕೊಂಡ ಬಳಿಕ ಕನಿಷ್ಠ 30 ನಿಮಿಷವಾದರೂ ಕಳೆದಿರಬೇಕು, ನಂತರವಷ್ಟೇ ಬೇರೆ ಮಾತ್ರೆ ತೆಗೆದುಕೊಳ್ಳಿ.