ನವದೆಹಲಿ: ಹಿಂದಿ ಭಾಷೆಯು ಭಾರತದ ಭಾಷೆಗಳ ವೈವಿಧ್ಯತೆಯನ್ನು ಒಂದುಗೂಡಿಸುತ್ತದೆ ಮತ್ತು ಅದು ವಿವಿಧ ಭಾರತೀಯ ಹಾಗೂ ಜಾಗತಿಕ ಭಾಷೆಗಳು, ಉಪಭಾಷೆಗಳನ್ನು ಗೌರವಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.
0
samarasasudhi
ಸೆಪ್ಟೆಂಬರ್ 14, 2023
ನವದೆಹಲಿ: ಹಿಂದಿ ಭಾಷೆಯು ಭಾರತದ ಭಾಷೆಗಳ ವೈವಿಧ್ಯತೆಯನ್ನು ಒಂದುಗೂಡಿಸುತ್ತದೆ ಮತ್ತು ಅದು ವಿವಿಧ ಭಾರತೀಯ ಹಾಗೂ ಜಾಗತಿಕ ಭಾಷೆಗಳು, ಉಪಭಾಷೆಗಳನ್ನು ಗೌರವಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.
'ಹಿಂದಿ ದಿವಸ್' ಹಿನ್ನೆಲೆಯಲ್ಲಿ ನೀಡಿದ ಸಂದೇಶದಲ್ಲಿ ಶಾ, ಹಿಂದಿ ಎಂದಿಗೂ ಯಾವುದೇ ಭಾರತೀಯ ಭಾಷೆಯೊಂದಿಗೆ ಸ್ಪರ್ಧೆಗಿಳಿದಿಲ್ಲ ಮತ್ತು ಮುಂದೆ ಸ್ಪರ್ಧೆಗಿಳಿಯುವುದಿಲ್ಲ.
ಎಲ್ಲಾ ಸ್ಥಳೀಯ ಭಾಷೆಗಳನ್ನು ಸಶಕ್ತಗೊಳಿಸಲು ಹಿಂದಿ ಮಾಧ್ಯಮವಾಗಲಿದೆ ಎಂದು ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
'ಭಾರತವು ವೈವಿಧ್ಯಮಯ ಭಾಷೆಗಳ ದೇಶವಾಗಿದೆ. ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಭಾಷೆಗಳ ವೈವಿಧ್ಯತೆಯನ್ನು ಹಿಂದಿ ಒಂದುಗೂಡಿಸುತ್ತದೆ'ಎಂದಿದ್ದಾರೆ.
'ಹಿಂದಿಯು ಪ್ರಜಾಸತ್ತಾತ್ಮಕ ಭಾಷೆಯಾಗಿದೆ. ಇದು ವಿವಿಧ ಭಾರತೀಯ ಭಾಷೆಗಳು, ಉಪಭಾಷೆಗಳು ಹಾಗೂ ಅನೇಕ ಜಾಗತಿಕ ಭಾಷೆಗಳನ್ನು ಗೌರವಿಸಿದೆ. ಅವುಗಳ ಶಬ್ದಕೋಶಗಳು, ವಾಕ್ಯಗಳು ಮತ್ತು ವ್ಯಾಕರಣ ನಿಯಮಗಳನ್ನು ಅಳವಡಿಸಿಕೊಂಡಿದೆ'ಎಂದು ಶಾ ಹೇಳಿದರು.
ಸ್ವಾತಂತ್ರ್ಯ ಹೋರಾಟದ ಕಷ್ಟದ ದಿನಗಳಲ್ಲಿ ದೇಶವನ್ನು ಒಗ್ಗೂಡಿಸುವಲ್ಲಿ ಹಿಂದಿ ಭಾಷೆ ಅಭೂತಪೂರ್ವ ಪಾತ್ರವನ್ನು ವಹಿಸಿದೆ ಮತ್ತು ಹಲವಾರು ಭಾಷೆಗಳು ಹಾಗೂ ಉಪಭಾಷೆಗಳನ್ನು ಹೊಂದಿರುವ ದೇಶದಲ್ಲಿ ಏಕತೆಯ ಭಾವನೆಯನ್ನು ತುಂಬಿದೆ ಎಂದು ಅವರು ಹೇಳಿದರು.