HEALTH TIPS

'ತುರ್ತು ಸಂದೇಶ' ರವಾನೆ ವ್ಯವಸ್ಥೆ ಪರೀಕ್ಷೆ

             ವದೆಹಲಿ: ತುರ್ತು ಸಂದರ್ಭಗಳಲ್ಲಿ ಜನರಿಗೆ ಕ್ಷಣಾರ್ಧದಲ್ಲಿ ಎಚ್ಚರಿಕೆ ಸಂದೇಶ ನೀಡುವ, ಜನರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದ ನೂತನ 'ಎಮರ್ಜೆನ್ಸಿ ಅಲರ್ಟ್‌' ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗವನ್ನು ದೂರಸಂಪರ್ಕ ಇಲಾಖೆ (ಡಿಒಟಿ) ದೇಶದಾದ್ಯಂತ ಶುಕ್ರವಾರ ನಡೆಸಿತು.

           'ಎಮರ್ಜೆನ್ಸಿ ಅಲರ್ಟ್‌: ಸೀವಿಯರ್' ಎಂಬ ಮಾದರಿ ಸಂದೇಶವೊಂದನ್ನು ಎಲ್ಲ ಮೊಬೈಲ್‌ ಬಳಕೆದಾರರಿಗೆ ರವಾನಿಸಲಾಗಿತ್ತು.

             ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಈ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದ್ದು, ಪರೀಕ್ಷಾರ್ಥವಾಗಿ ಈ ಸಂದೇಶವನ್ನು ರವಾನಿಸಲಾಗಿತ್ತು.

             ಇಂಗ್ಲಿಷ್‌ ಮತ್ತು ಹಿಂದಿಯಲ್ಲಿದ್ದ ಈ ಸಂದೇಶವು ತಲುಪಿದ ನಂತರ ಮೊಬೈಲ್‌ ಫೋನ್‌ಗಳು ಜೋರಾದ ಶಬ್ದದೊಂದಿಗೆ ಕಂಪಿಸುವ ಮೂಲಕ ಜನರನ್ನು ಎಚ್ಚರಿಸಿದವು.

             ಡಿಒಟಿ ಹಾಗೂ ಎನ್‌ಡಿಎಂಎ ಸಹಭಾಗಿತ್ವದಲ್ಲಿ ಈ ತುರ್ತು ಸಂದೇಶ ರವಾನಿಸುವ 'ಸೆಲ್‌ ಬ್ರಾಡ್‌ಕಾಸ್ಟ್ ಅಲರ್ಟ್‌ ಸಿಸ್ಟಮ್‌'ನ ಪರೀಕ್ಷಾರ್ಥ ಪ್ರಯೋಗ ನಡೆಯಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries