ನವದೆಹಲಿ: 'ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳು, ತಮ್ಮ ಜೈಲುಶಿಕ್ಷೆ ಪೂರ್ಣಗೊಳ್ಳುವ ಮುನ್ನವೇ ಬಿಡುಗಡೆಗೆ ಅರ್ಹರಾಗಿದ್ದು ಹೇಗೆ' ಎಂದು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, 'ಕೆಲ ಅಪರಾಧಿಗಳಿಗೆ ಇಂಥ ವಿಶೇಷ ಸವಲತ್ತು ಹೇಗೆ ಲಭಿಸಿತು ಎಂಬುದು ಅಚ್ಚರಿ ಮೂಡಿಸುತ್ತದೆ' ಎಂದು ಗುರುವಾರ ಹೇಳಿದೆ.
0
samarasasudhi
ಸೆಪ್ಟೆಂಬರ್ 15, 2023
ನವದೆಹಲಿ: 'ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳು, ತಮ್ಮ ಜೈಲುಶಿಕ್ಷೆ ಪೂರ್ಣಗೊಳ್ಳುವ ಮುನ್ನವೇ ಬಿಡುಗಡೆಗೆ ಅರ್ಹರಾಗಿದ್ದು ಹೇಗೆ' ಎಂದು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, 'ಕೆಲ ಅಪರಾಧಿಗಳಿಗೆ ಇಂಥ ವಿಶೇಷ ಸವಲತ್ತು ಹೇಗೆ ಲಭಿಸಿತು ಎಂಬುದು ಅಚ್ಚರಿ ಮೂಡಿಸುತ್ತದೆ' ಎಂದು ಗುರುವಾರ ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.
ಅಪರಾಧಿಯೊಬ್ಬರ ಪರ ಹಾಜರಿದ್ದ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರ,'ಎಸಗಿದ ಅಪರಾಧ ಘೋರವಾಗಿತ್ತು ಎಂಬ ಏಕೈಕ ಕಾರಣಕ್ಕಾಗಿ ಅವಧಿಪೂರ್ವ ಬಿಡುಗಡೆ ಪ್ರಯೋಜನದಿಂದ ಅಪರಾಧಿಗಳು ವಂಚಿತರಾಗುವಂತೆ ಮಾಡಲಾಗದು' ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿ, ಅಪರಾಧದ ಸ್ವರೂಪ ಹಾಗೂ ಸಾಕ್ಷ್ಯಗಳು ಅಪರಾಧಿಗಳ ಅವಧಿಪೂರ್ವ ಬಿಡುಗಡೆ ಕುರಿತ ಅರ್ಜಿಯನ್ನು ಪರಿಗಣಿಸಲು ಕಾರಣವಾಗಲಾರವು ಎಂಬ ವಕೀಲರ ವಾದವನ್ನು ನ್ಯಾಯಪೀಠ ಒಪ್ಪಿತು.
ಆದರೆ, ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಅವಧಿಪೂರ್ವ ಬಿಡುಗಡೆ ಮಾಡಲಾಗಿದೆ. ಈ ವಿಚಾರದಲ್ಲಿ ಅಪರಾಧಿಗಳಿಗೆ ವಿಶೇಷ ಸವಲತ್ತು ನೀಡಲಾಗಿತ್ತೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ನ್ಯಾಯಪೀಠ ಹೇಳಿದೆ.
'ಅಪರಾಧಿಗಳಿಗೆ 1,000-1,500 ದಿನಗಳ ಕಾಲ ಪೆರೋಲ್ ನೀಡಲಾಗಿತ್ತು. ಹೀಗಾಗಿ ಕೆಲ ಅಪರಾಧಿಗಳಿಗೆ ಇಷ್ಟೊಂದು ವಿಶೇಷ ಸವಲತ್ತು ಸಿಗಲು ಹೇಗೆ ಸಾಧ್ಯ? ಈ ಅಪರಾಧಿಗಳು ಅವಧಿಪೂರ್ಣಗೊಳ್ಳುವ ಮುನ್ನವೇ ಬಿಡುಗಡೆಗೆ ಅರ್ಹರೇ' ಎಂದು ಪ್ರಶ್ನಿಸಿದ ನ್ಯಾಯಪೀಠ, ವಿಚಾರಣೆಯನ್ನು ಸೆ. 20ಕ್ಕೆ ಮುಂದೂಡಿತು.