ಹೈದರಾಬಾದ್: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಹೊಳಗುಂದ ಮಂಡಲದ ದೇವರಗಟ್ಟು ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದ ಹಬ್ಬದ ಅಂಗವಾಗಿ ನಡೆದ ಕೋಲು ಕಾಳಗದಲ್ಲಿ ಮೂವರು ಸಾವಿಗೀಡಾಗಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
0
samarasasudhi
ಅಕ್ಟೋಬರ್ 26, 2023
ಹೈದರಾಬಾದ್: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಹೊಳಗುಂದ ಮಂಡಲದ ದೇವರಗಟ್ಟು ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದ ಹಬ್ಬದ ಅಂಗವಾಗಿ ನಡೆದ ಕೋಲು ಕಾಳಗದಲ್ಲಿ ಮೂವರು ಸಾವಿಗೀಡಾಗಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಗಡಿಯಲ್ಲಿರುವ ಹೊಳಗುಂದವು ಹೆಚ್ಚಿನ ಸಂಖ್ಯೆಯ ಕನ್ನಡ ಭಾಷಿಕರ ನೆಲೆಯಾಗಿದೆ.
ಉತ್ಸವದ ವೀಕ್ಷಣೆಗಾಗಿ ಹಲವರು ಮರಗಳನ್ನು ಹತ್ತಿ ಕುಳಿತಿದ್ದರು. ಈ ಸಂದರ್ಭ ಕೆಲ ಕಿಡಿಗೇಡಿಗಳು ತಮ್ಮ ಕಡೆಗೆ ಎಸೆದ ಬೆಂಕಿ ಉಂಡೆಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಮರದ ಕೊಂಬೆಯಿಂದ ಬಿದ್ದು ಮೂವರು ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಮೃತರನ್ನು ಕರ್ನೂಲ್ ಜಿಲ್ಲೆಯ ಗಣೇಶ್ (19), ರಾಮಾಂಜೆಯಲು (59) ಮತ್ತು ಬಳ್ಳಾರಿ ಮೂಲದ ಪ್ರಕಾಶ್ (30) ಎಂದು ಕರ್ನೂಲ್ ಪೊಲೀಸರು ಗುರುತಿಸಿದ್ದಾರೆ.
ಮಾಳಮ್ಮ-ಮಲ್ಲೇಶ್ವರ ಕಲ್ಯಾಣೋತ್ಸವದ ಅಂಗವಾಗಿ ನಡೆದ ಧಾರ್ಮಿಕ ವಿಧಿ ವಿಧಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಮಂಡಲದ ವಿವಿಧ ಗ್ರಾಮಗಳ ಜನರು ಸ್ಥಳೀಯ ದೇವತೆಗಳ ವಿಗ್ರಹಗಳನ್ನು ಪಡೆಯಲು ಕೋಲುಗಳನ್ನು ಹಿಡಿದು ಕಾಳಗದಲ್ಲಿ ತೊಡಗುತ್ತಾರೆ. ಆದರೆ, ಈ ವರ್ಷ ಲಾಠಿ ಪ್ರಹಾರದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.