ಜೈಪುರ (PTI): ವಿಧಾನಸಭಾ ಚುನಾವಣೆ ನಡೆಯುವ ರಾಜಸ್ಥಾನದಲ್ಲಿ ಕಾನೂನು ಜಾರಿ ಸಂಸ್ಥೆಗಳು ಕಳೆದ ಹದಿನೈದು ದಿನಗಳಲ್ಲಿ ₹244 ಕೋಟಿ ನಗದು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
0
samarasasudhi
ಅಕ್ಟೋಬರ್ 25, 2023
ಜೈಪುರ (PTI): ವಿಧಾನಸಭಾ ಚುನಾವಣೆ ನಡೆಯುವ ರಾಜಸ್ಥಾನದಲ್ಲಿ ಕಾನೂನು ಜಾರಿ ಸಂಸ್ಥೆಗಳು ಕಳೆದ ಹದಿನೈದು ದಿನಗಳಲ್ಲಿ ₹244 ಕೋಟಿ ನಗದು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಪೊಲೀಸ್, ಅಬಕಾರಿ, ಆದಾಯ ತೆರಿಗೆ ಹಾಗೂ ಇತರ ಕಾನೂನು ಜಾರಿ ಸಂಸ್ಥೆಗಳು ಅಕ್ರಮ ನಗದು, ಮದ್ಯ, ಮಾದಕ ವಸ್ತು, ಚಿನ್ನ, ಬೆಳ್ಳಿ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿವೆ.
ಅಧಿಕಾರಿಗಳ ಪ್ರಕಾರ, 2021ರಲ್ಲಿ ₹322 ಕೋಟಿ, 2022ರಲ್ಲಿ ₹347 ಕೋಟಿ, ಮತ್ತು 2023ರಲ್ಲಿ ಇಲ್ಲಿಯವರೆಗೆ ₹1,021 ಕೋಟಿ ಆಗಿದೆ.
ಜೂನ್‌ನಿಂದ ಈವರೆಗೆ ನಗದು ಸೇರಿ ₹648 ಕೋಟಿ ಮೊತ್ತದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಹದಿನೈದು ದಿನಗಳಲ್ಲಿ ಪೊಲೀಸರು, ಆದಾಯ ತೆರಿಗೆ ಇಲಾಖೆ ಮತ್ತು ಇತರ ಏಜೆನ್ಸಿಗಳು ₹39.30 ಕೋಟಿ ನಗದು ಹಾಗೂ ₹20.12 ಕೋಟಿ ಮೌಲ್ಯದ 10.60 ಲಕ್ಷ ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಂಡಿವೆ.
₹46.76 ಕೋಟಿ ಮೌಲ್ಯದ ಮಾದಕವಸ್ತು, ₹30.40 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ಇತರ ಅಮೂಲ್ಯ ವಸ್ತುಗಳು ಮತ್ತು ಮತದಾರರಿಗೆ ಹಂಚಿಕೆ ಮಾಡಲು ಸಂಗ್ರಹಿಸಿದ್ದ ₹84.22 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಪ್ರವೀಣ್ ಗುಪ್ತಾ ಹೇಳಿದ್ದಾರೆ.