HEALTH TIPS

ವಿಕಿಪೀಡಿಯವನ್ನು '***ಪೀಡಿಯಾ' ಎಂದು ಮರುನಾಮಕರಣ ಮಾಡಬೇಕು: $1 ಬಿಲಿಯನ್ ಭರವಸೆ : ಹೊಸ ಪದ ಸಮರ ಪ್ರಾರಂಭಿಸಿದ ಮಸ್ಕ್

                 ಬಿಲಿಯನೇರ್ ಎಲೋನ್ ಮಸ್ಕ್ ಅವರು ಟ್ವಿಟರ್ ಅನ್ನು ವಹಿಸಿಕೊಂಡಾಗಿನಿಂದ ಸುದ್ದಿಯಲ್ಲಿದ್ದಾರೆ. ಟ್ವಿಟ್ಟರ್ ನಲ್ಲಿ ಮಾಡಿರುವ ಬದಲಾವಣೆಗಳು ಮತ್ತು ಈ ನಿಟ್ಟಿನಲ್ಲಿ ಅವರು ನೀಡುವ ಹೇಳಿಕೆಗಳು  ಇಂಟರ್ ನೆಟ್ ಲೋಕದಲ್ಲಿ ಚರ್ಚೆಯ ವಿಷಯವನ್ನಾಗಿಸಿದೆ.

            ಸ್ಪೇಸ್ ಎಕ್ಸ್ ಮತ್ತು ಟೆಸ್ಲಾ ಸಂಸ್ಥಾಪಕರಾದ ಮಸ್ಕ್ ಅವರು ತಮ್ಮ ಮಾಲೀಕತ್ವದ ಟ್ವಿಟ್ಟರ್(ಎಕ್ಸ್) ನಲ್ಲಿ ನಿಯಮಿತವಾಗಿ ಪೋಸ್ಟ್ ಮಾಡುತ್ತಾರೆ. ಅವರ ಟ್ವೀಟ್‍ಗಳು ದ್ವಂದ್ವಾರ್ಥದ ಅಭಿವ್ಯಕ್ತಿಗಳನ್ನು ಬಳಸುವುದಕ್ಕಾಗಿ ಭಾರೀ ಟೀಕೆಗೆ ಗುರಿಯಾಗುತ್ತವೆ. ಮೊನ್ನೆಯμÉ್ಟೀ ಅವರು ಇಂತಹ ಹೇಳಿಕೆ ನೀಡಿದ್ದಾರೆ.

                ಮಸ್ಕ್ ಅವರ ಹೊಸ ಪೋಸ್ಟ್ ವಿಕಿಪೀಡಿಯಾ ತಮ್ಮ ಹೆಸರನ್ನು ಬದಲಾಯಿಸಲು ಒಪ್ಪಿಕೊಂಡರೆ $1 ಬಿಲಿಯನ್ ಭರವಸೆಯಾಗಿದೆ. ಮಸ್ಕ್ ಅದನ್ನು 'ಡಿಕಿಪೀಡಿಯಾ' ಎಂದು ಮರುಹೆಸರಿಸಲು ಬಯಸಿದ್ದಾರೆ.  ಕನಿಷ್ಠ ಒಂದು ವರ್ಷದವರೆಗೆ ಹೊಸ ಹೆಸರನ್ನು ಬದಲಾಯಿಸಬಾರದು ಎಂದು ಮಸ್ಕ್ ಹೇಳಿದ್ದಾರೆ. ಟ್ವೀಟ್ 9.9 ಮಿಲಿಯನ್ ಜನರನ್ನು ತಲುಪಿದೆ ಮತ್ತು 100,000 ಕ್ಕೂ ಹೆಚ್ಚು ಲೈಕ್‍ಗಳನ್ನು ಸ್ವೀಕರಿಸಿದೆ.

                ಮಕ್ಸ್ ಅವರ ಹೊಸ ಕಾಮೆಂಟ್ ವಿಕಿಪೀಡಿಯ ಸಹ-ಸಂಸ್ಥಾಪಕ ಜಿಮ್ಮಿ ವೇಲ್ಸ್ ಮತ್ತು ಬಿಲಿಯನೇರ್ ಎಲೋನ್ ಮಸ್ಕ್ ನಡುವಿನ ಜಗಳದ ಭಾಗವಾಗಿದೆ ಎಂದು ನಂಬಲಾಗಿದೆ. ಟರ್ಕಿಯ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ಎಕ್ಸ್ ನÀಲ್ಲಿ ಕೆಲವು ವಿಷಯವನ್ನು ನಿರ್ಬಂಧಿಸುವ ಮಸ್ಕ್ ನಿರ್ಧಾರವನ್ನು ಜಿಮ್ಮಿ ವೇಲ್ಸ್ ಟೀಕಿಸಿದರು. ಚುನಾವಣೆಯ ಸಮಯದಲ್ಲಿ ಟರ್ಕಿಯ ಅನೇಕ ಜನರು ಟ್ವಿಟ್ಟರ್ ಗೆ ಪ್ರವೇಶವನ್ನು ಹೊಂದಿರಲಿಲ್ಲ. ಎರ್ಡೋಗನ್ ವಿರುದ್ಧದ ಟೀಕೆಗಳ ಬಗ್ಗೆ ಟರ್ಕಿಯ ಜನರಿಗೆ ತಿಳಿದಿರಬಾರದು ಎಂಬ ಕಾರಣಕ್ಕಾಗಿ ಮಸ್ಕ್ ಅವರು ಅಂತಹ ನಿರ್ಣಯ  ತೆಗೆದುಕೊಂಡಿದ್ದಾರೆ ಎಂದು ವಿಕಿಪೀಡಿಯಾ ಸಹ-ಸಂಸ್ಥಾಪಕರು ಆರೋಪಿಸಿದ್ದಾರೆ.

               ಕಳೆದ ಮೇ ತಿಂಗಳಲ್ಲಿ ಈ ಘಟನೆ ನಡೆದಿದೆ. ಜಿಮ್ಮಿ ವೇಲ್ಸ್ ಅವರ ಟೀಕೆಯು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮಸ್ಕ್ ನ ನಡೆಯ ವಿರುದ್ಧವಾಗಿತ್ತು. ಈ ಕಾರಣದಿಂದಾಗಿ, ಮಸ್ಕ್ ಮತ್ತು ವೇಲ್ಸ್ ನಡುವೆ ದೊಡ್ಡ ವಾದಗಳು ನಡೆದವು. ಇದರ ಅವಶೇಷಗಳು ವಿಕಿಪೀಡಿಯಾದ ವಿರುದ್ಧ ಮಸ್ಕ್ ಅವರ ದ್ವಂದ್ವಾರ್ಥದ ಟೀಕೆಗಳು ಆಗಿವೆ ಎನ್ನಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries