ತಿರುವನಂತಪುರಂ: 28ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಡೆಲಿಗೇಟ್ ಪಾಸ್ ಗಳ ಬೆಲೆ ಹೆಚ್ಚಿಸಲಾಗಿದೆ. 18ರಷ್ಟು ಜಿಎಸ್‍ಟಿ ಸೇರ್ಪಡೆಯಾಗಿರುವುದರಿಂದ ದರ ಏರಿಕೆಯಾಗಿದೆ.
ಪ್ರಸ್ತುತ, ಪ್ರವೇಶ ಪಾಸ್‍ಗೆ ಶುಲ್ಕ 1000 ಮತ್ತು ವಿದ್ಯಾರ್ಥಿಗಳಿಗೆ 500 ರೂ.ದರವಿದೆ. ತೆರಿಗೆ ಸೇರಿ ಕ್ರಮವಾಗಿ 1180 ಮತ್ತು 590 ರೂ. ಮೇಳದಲ್ಲಿ ಪಾಲ್ಗೊಳ್ಳುವವರಿಗೆ ವೇಳಾಪಟ್ಟಿ, ಚಲಚಿತ್ರೋತ್ಸವದ ಪುಸ್ತಕ, ಗುರುತಿನ ಚೀಟಿ ಸೇರಿದಂತೆ ಕಿಟ್‍ಗಳನ್ನು ನೀಡಲಾಗುತ್ತದೆ. ಡಿಸೆಂಬರ್ 08 ರಿಂದ 15 ರವರೆಗೆ ತಿರುವನಂತಪುರದಲ್ಲಿ ಚಲನಚಿತ್ರೋತ್ಸವ ನಡೆಯಲಿದೆ.
ಚಲನಚಿತ್ರೋತ್ಸವವನ್ನು ನಡೆಸಲು ಸಾಮಾನ್ಯವಾಗಿ ತೆರಿಗೆ ಆದಾಯದಿಂದ ಸರ್ಕಾರದ ಅನುದಾನವನ್ನು ಬಳಸಲಾಗುತ್ತದೆ. ಈಗ ಈ ತೆರಿಗೆ ಹಣದಲ್ಲೇ ತೆರಿಗೆ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತೆರಿಗೆ ಸೇರ್ಪಡೆಗೆ ಚಲನಚಿತ್ರ ಅಕಾಡೆಮಿ ಅಸಮಾಧಾನ ವ್ಯಕ್ತಪಡಿಸಿದೆ.


