ಕೊಚ್ಚಿ: ನೆಡುಂಬಶ್ಶೇರಿ ವಿಮಾನ ನಿಲ್ದಾಣಕ್ಕೆ ಯುವಕನೊಬ್ಬ ಬಾಂಬ್ ಬೆದರಿಕೆ ಹಾಕಿದ್ದಾನೆ. ಬಳಿಕ ಆತನನ್ನು ಪತ್ತೆಹಚ್ಚಲಾಗಿದ್ದು, ಆಲಪ್ಪುಳ ಮೂಲದ ರಾಕೇಶ್ ರವೀಂದ್ರನ್ ಬಂಧಿತ ಆರೋಪಿ.
ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಸ್ಪೈಸ್ ಜೆಟ್ ವಿಮಾನದಲ್ಲಿ ದುಬೈಗೆ ತೆರಳಲು ಬಂದಿದ್ದ ಈತ ಲಗೇಜ್ ತಪಾಸಣೆ ವೇಳೆ ಬ್ಯಾಗ್ ನಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಹಾಕಿದ್ದ.
ತಪಾಸಣೆ ವೇಳೆ ರಾಕೇಶ್ ಸಾಗಿಸುತ್ತಿದ್ದ ಲಗೇಜ್‍ನ ತೂಕವು ಅನುಮತಿಸಲಾದ ತೂಕಕ್ಕಿಂತ ಹೆಚ್ಚು ಎಂದು ಅಧಿಕಾರಿಗಳು ತಿಳಿಸಿದ್ದರು. ಅಲ್ಲದೆ ಲಗೇಜ್ ತೂಕ ಕಡಿಮೆ ಮಾಡುವಂತೆ ಸಲಹೆ ನೀಡಿದ್ದರು. ಇದರೊಂದಿಗೆ ಯುವಕ ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿದ್ದಾನೆ. ನಂತರ ಬಾಂಬ್ ಸ್ಕ್ವಾಡ್ ಆಗಮಿಸಿ ಪರಿಶೀಲನೆ ನಡೆಸಿತು.
ತಪಾಸಣೆಯ ನಂತರ ವಿಮಾನ ಎರಡು ಗಂಟೆ ತಡವಾಗಿ ಹೊರಟಿತು. ವಿಮಾನ ನಿಲ್ದಾಣದ ಅಧಿಕಾರಿಗಳು ರಾಕೇಶ್‍ನನ್ನು ನೆಡುಂಬಶ್ಶೇರಿ ಪೋಲೀಸರಿಗೆ ಒಪ್ಪಿಸಿದ್ದಾರೆ. ತನಿಖೆಯ ಬಳಿಕ ರಾಕೇಶ್ ರವೀಂದ್ರನ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.


