HEALTH TIPS

ಆರ್.ಎಸ್.ಎಸ್.ನ ಹಿರಿಯ ಪ್ರಚಾರಕ ಆರ್.ಹರಿ ನಿಧನ

             ಎರ್ನಾಕುಳಂ: ಆರ್‍ಎಸ್‍ಎಸ್‍ನ ಹಿರಿಯ ಪ್ರಚಾರಕ ಆರ್.ಹರಿ (93) ನಿಧನರಾಗಿದ್ದಾರೆ. ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಂದಾಗಿ ಎರ್ನಾಕುಳಂನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

                ಆರ್‍ಎಸ್‍ಎಸ್‍ನ ಮಾಜಿ ಅಖಿಲ ಭಾರತೀಯ ಬೌಧಿಕ್ ಪ್ರಮುಖ್ ಆಗಿದ್ದ ಅವರು ಪ್ರಸಿದ್ಧ ಬರಹಗಾರ ಮತ್ತು ಭಾಷಣಕಾರರಾಗಿದ್ದರು.

             ರಂಗ ಹರಿಜಿ ಅಥವಾ ಹರಿ ಏಟ್ಟನ್ ದೇಶದ ಅತ್ಯಂತ ಹಿರಿಯ ಆರ್‍ಎಸ್‍ಎಸ್ ಪ್ರಚಾರಕರು ಮತ್ತು ಚಿಂತಕರಲ್ಲಿ ಒಬ್ಬರು. ಅವರು 1930 ರಲ್ಲಿ  ಎರ್ನಾಕುಳಂನಲ್ಲಿ ಜನಿಸಿದರು. ಕಾಲೇಜು ದಿನಗಳಲ್ಲಿ ಆರ್.ಎಸ್.ಎಸ್. ಪ್ರಭಾವಿತರಾಗಿ ಬಳಿಕ ಪೂರ್ಣ ಸಮಯದ ಪ್ರಚಾರಕರಾಗಿ ನಿಯುಕ್ತರಾದರು. ತ್ರಿಶೂರ್, ಪಾಲಕ್ಕಾಡ್, ತಿರುವನಂತಪುರಂ ಮತ್ತು ಎರ್ನಾಕುಳಂ ನಗರ ಕೇಂದ್ರವಾಗಿ ಕಾರ್ಯನಿರ್ವಹಿಸಿದ್ದರು. ಕೇರಳದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೆ. ಭಾಸ್ಕರ್ ರಾವ್, ಪಿ. ಮಾಧವಜಿಯವರೊಂದಿಗೆ ಆರ್‍ಎಸ್‍ಎಸ್‍ನ ಗುಪ್ತ ಚಟುವಟಿಕೆಗಳನ್ನು ಮುನ್ನಡೆಸಿದರು. ಅವರು ಕುರುಕ್ಷೇತ್ರದ ಉಸ್ತುವಾರಿ ವಹಿಸಿದ್ದರು, ಆರ್‍ಎಸ್‍ಎಸ್‍ನಿಂದ ಪ್ರಸಾರವಾದ ರಹಸ್ಯ ತುರ್ತು ವಿರೋಧಿ ಲೇಖನಗಳ ಪ್ರಮುಖರಾಗಿದ್ದರು.

            1980 ರಲ್ಲಿ, ಅವರು ಕೇರಳ ಪ್ರಾಂತ ಬೌದ್ಧಿಕ್ ಪ್ರಮುಖ್ ಆಗಿ ನೇಮಕಗೊಂಡರು. 1981ರಲ್ಲಿ ಸಹಪ್ರಾಂತ ಪ್ರಚಾರಕರಾದರು. 1983ರಲ್ಲಿ ಪ್ರಾಂತ ಪ್ರಚಾರಕರಾಗಿ ಆರ್.ಹರಿ ನೇಮಕಗೊಂಡು. 1994ರವರೆಗೆ ಆ ಸ್ಥಾನದಲ್ಲಿ ಮುಂದುವರಿದರು. ಇದರೊಂದಿಗೆ, 1990 ರಲ್ಲಿ, ಅವರನ್ನು ಅಖಿಲ ಭಾರತೀಯ ಸಹಬೌಧಿಕ್ ಪ್ರಮುಖ್ ಆಗಿ ನೇಮಿಸಲಾಯಿತು. 1991 ರಲ್ಲಿ ಅವರನ್ನು ಬೌದ್ಧಿಕ್ ಪ್ರಮುಖ್ ಆಗಿ ನೇಮಿಸಲಾಯಿತು. ಅವರು 2005 ರವರೆಗೆ ಆ ಸ್ಥಾನದಲ್ಲಿ ಇದ್ದರು. 1994 ರಿಂದ 2005 ರವರೆಗೆ, ಅವರು ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಹಿಂದೂ ಸ್ವಯಂಸೇವಕ ಸಂಘದ ಉಸ್ತುವಾರಿ ವಹಿಸಿ ಮುನ್ನಡೆಸಿದ್ದರು.  ಈ ನಿಯೋಜನೆಗೆ ಸಂಬಂಧಿಸಿದಂತೆ, ಅವರು ಐದು ಖಂಡಗಳ 22 ದೇಶಗಳಿಗೆ ಪ್ರಯಾಣಿಸಿದರು. 2001 ರಲ್ಲಿ ಲಿಥುವೇನಿಯಾದಲ್ಲಿ ನಡೆದ ಕ್ರಿಶ್ಚಿಯನ್ ಪೂರ್ವ ಧರ್ಮಗಳ ಸಮ್ಮೇಳನದಲ್ಲಿ ಆರ್.ಹರಿ ಭಾಗವಹಿಸಿದ್ದರು. ಆರೆಸ್ಸೆಸ್ ಅಖಿಲ ಭಾರತ ಕಾರ್ಯಕಾರಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು.

              ಅವರು ಮಲಯಾಳಂನಲ್ಲಿ 43 ಪುಸ್ತಕಗಳನ್ನು ಬರೆದಿದ್ದಾರೆ. ಹಿಂದಿಯಲ್ಲಿ 12 ಮತ್ತು ಇಂಗ್ಲಿಷ್ ನಲ್ಲಿ ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಸಂಸ್ಕøತ, ಹಿಂದಿ ಮತ್ತು ಇಂಗ್ಲಿಷ್ ನಿಂದ ಮಲಯಾಳಂ ಭಾಷೆಗೆ ಅನೇಕ ಪುಸ್ತಕಗಳನ್ನು ಅನುವಾದಿಸಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries