ಕೊಟ್ಟಾಯಂ: ಕಳವುಗೈದ ನೆಕ್ಲೇಸ್ ಅನ್ನು ಮಾರಾಟ ಮಾಡಿದ ಹಣವನ್ನು ಕಳ್ಳನು ಮಾಲೀಕರಿಗೆ ಹಿಂದಿರುಗಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಎಲ್ಲರನ್ನೂ ಬೆಚ್ಚಿ ಬೀಳಿಸುವ ಘಟನೆ ಕೊಟ್ಟಾಯಂ ಕುಮಾರನಲ್ಲೂರಿನಲ್ಲಿ ನಡೆದಿದೆ. ಅರ್ಧ ಲಕ್ಷ ರೂ ಹಾಗೂ ಬರಹ ಮೂಲದ ಉಲ್ಲೇಖವೊಂದನ್ನು ಮಾಲೀಕನ ಮನೆಯಲ್ಲಿರಿಸಿ ಕಳ್ಳ ಕಾಲ್ಕಿತ್ತಿದ್ದಾನೆ.
ಇದೇ ತಿಂಗಳ 19ರಂದು ಕುಮಾರನಲ್ಲೂರು ಮೂಲದ ಕುಂಜನ್ ಎಂಬುವವರ ಮನೆಯಲ್ಲಿ ಹಾರ ಕಳವಾಗಿತ್ತು. ಮೂರು ವರ್ಷದ ಮೊಮ್ಮಗಳ ಸರ ಕಳ್ಳತನವಾಗಿತ್ತು. ಹಾರ ಒಂದು ಪವನ್ ಗಿಂತ ಹೆಚ್ಚು ಮೌಲ್ಯದ್ದಾಗಿತ್ತು. ಬೆಳಗ್ಗೆ ಮಗುವಿನ ಕೊರಳಿಗೆ ಹಾರ ಹಾಕಲಾಗಿತ್ತು. ಮನೆಯವರು ಹೇಳುವ ಪ್ರಕಾರ ಸಂಜೆ ಮಗುವಿನೊಂದಿಗೆ ಕುಮಾರನಲ್ಲೂರಿನ ಅಂಗಡಿಯೊಂದಕ್ಕೆ ಹೋದ ಬಳಿಕ ಹಾರ ನಾಪತ್ತೆಯಾಗಿದೆ.
ಮನೆಯವರು ಹಲವೆಡೆ ಹಾರಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಎರಡು ದಿನಗಳ ನಂತರ, ಕಳ್ಳನು ಕ್ಷಮಾಪಣೆ ಪತ್ರದೊಂದಿಗೆ ಕುಂಜನ್ ಮನೆಗೆ 52,500 ರೂ. ಹಿಂತಿರುಗಿಸಿ ಮರೆಯಾಗಿದ್ದಾನೆ. ನೆಕ್ಲೇಸ್ ಮಾರಾಟ ಮಾಡಿದ್ದು ಈ ಬಗ್ಗೆ ಕ್ಷಮೆಯಾಚಿಸುವ ಟಿಪ್ಪಣಿ ಮತ್ತು ನೀವು ಹುಡುಕುತ್ತಿರುವುದನ್ನು ನೋಡಿದ ನಂತರ ನನ್ನಲ್ಲಿ ಶಾಂತಿ ಇಲ್ಲವಾಗಿದ್ದು, ಆದ್ದರಿಂದ ನಾನು ಅದರ ವಿಕ್ರಯದ ಹಣದೊಂದಿಗೆ ಕ್ಷಮೆಯಾಚಿಸುತ್ತೇನೆ ಎಂದು ಬರೆಯಲಾಗಿದೆ.





