HEALTH TIPS

ಮಿಜೋರಾಂ: ಎಎಪಿ ರಾಜ್ಯಾಧ್ಯಕ್ಷ ಪಚುವು ಅತ್ಯಂತ ಶ್ರೀಮಂತ ಅಭ್ಯರ್ಥಿ

        ಜ್ವಾಲ್: ಮಿಜೋರಾಂ ವಿಧಾನಸಭಾ ಚುನಾವಣೆಯ ಕಣದಲ್ಲಿರುವ ಒಟ್ಟು 174 ಅಭ್ಯರ್ಥಿಗಳಲ್ಲಿ 112 ಮಂದಿ ಕೋಟ್ಯಧಿಪತಿಗಳಾಗಿದ್ದು, ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಾಧ್ಯಕ್ಷ ಆಂಡ್ರ್ಯೂ ಲಾಲ್ರೆಮ್ಕಿಮಾ ಪಚುವು ಅವರು ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.

        ಅಭ್ಯರ್ಥಿಗಳು ಸಲ್ಲಿಸಿರುವ ಅಫಿಡವಿಟ್‌ಗಳ ಪ್ರಕಾರ, ಶೇಕಡಾ 64.4 ರಷ್ಟು ಅಭ್ಯರ್ಥಿಗಳು ₹1 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.

₹68.93 ಕೋಟಿ ಮೌಲ್ಯದ ಘೋಷಿತ ಆಸ್ತಿಯೊಂದಿಗೆ, ಎಎಪಿಯ ಮಿಜೋರಾಂ ರಾಜ್ಯ ಘಟಕದ ಅಧ್ಯಕ್ಷ ಆಂಡ್ರ್ಯೂ ಲಾಲ್ರೆಮ್ಕಿಮಾ ಪಚುವು ಕಣದಲ್ಲಿರುವ ಅಭ್ಯರ್ಥಿಗಳಲ್ಲೇ ಅತ್ಯಂತ ಶ್ರೀಮಂತರಾಗಿದ್ದಾರೆ. ಅವರು ಐಜ್ವಾಲ್ ಉತ್ತರ-III ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

        ಪಚುವು ನಂತರದ ಸ್ಥಾನಗಳಲ್ಲಿ ₹55.6 ಕೋಟಿ ಆಸ್ತಿ ಘೋಷಿಸಿಕೊಂಡಿರುವ ಕಾಂಗ್ರೆಸ್‌ನ ಆರ್ ವನ್ಲಾಲ್ಟ್ಲುವಾಂಗಾ (ಸೆರ್ಚಿಪ್ ಕ್ಷೇತ್ರ) ಮತ್ತು ಜೋರಾಮ್ ಪೀಪಲ್ಸ್ ಮೂವ್‌ಮೆಂಟ್‌ನ ಎಚ್ ಗಿಂಜಲಾಲಾ (ಚಾಂಫೈ ಉತ್ತರ ಕ್ಞೇತ್ರ) ₹36.9 ಕೋಟಿ ಘೋಷಿತ ಆಸ್ತಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

        ಸೆರ್ಚಿಪ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಮ್‌ಲುನ್-ಎಡೆನಾ ಅತ್ಯಂತ ಬಡ ಅಭ್ಯರ್ಥಿಯಾಗಿದ್ದು, ₹1,500 ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

            ಲಾಂಗ್ಟ್ಲೈ ವೆಸ್ಟ್‌ನ ಬಿಜೆಪಿ ಅಭ್ಯರ್ಥಿ ಜೆಬಿ ರುಯಲ್ಚಿಂಗಾ ಅವರ ಆಸ್ತಿ ಮೌಲ್ಯ ₹90.32 ಕೋಟಿ ಎಂದು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ತಪ್ಪಾಗಿ ಉಲ್ಲೇಖಿಸಲಾಗಿದ್ದು, ಪಕ್ಷವು ತಿದ್ದುಪಡಿ ಕೋರಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries