ನವದೆಹಲಿ (PTI): ಪರಿಸರಕ್ಕೆ ಮಾರಕ ಎಂಬ ಹಿನ್ನೆಲೆಯಲ್ಲಿ ಪೇಪರ್ ಕಪ್‌ಗಳ ಬಳಕೆ ನಿಷೇಧಿಸಿದ್ದ ಕ್ರಮಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
0
samarasasudhi
ಅಕ್ಟೋಬರ್ 24, 2023
ನವದೆಹಲಿ (PTI): ಪರಿಸರಕ್ಕೆ ಮಾರಕ ಎಂಬ ಹಿನ್ನೆಲೆಯಲ್ಲಿ ಪೇಪರ್ ಕಪ್‌ಗಳ ಬಳಕೆ ನಿಷೇಧಿಸಿದ್ದ ಕ್ರಮಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ತಮಿಳುನಾಡಿನಲ್ಲಿ 2019ರಲ್ಲಿ ಇಂತಹ ಕಪ್‌ಗಳ ಬಳಕೆಗೆ ಚಾಲನೆ ನೀಡಲಾಗಿತ್ತು.
ಪೇಪರ್ ಕಪ್‌ಗಳು ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಇವುಗಳ ತಯಾರಿಕೆಗೆ ಹೆಚ್ಚಿನ ಮರಗಳನ್ನು ಕಡಿಯಬೇಕಾಗುತ್ತದೆ. ಮರುಬಳಕೆ ಪ್ರಕ್ರಿಯೆಯೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂಬ ಐಐಟಿ ವರದಿ ಆಧರಿಸಿ ಬಳಕೆಯನ್ನು ನಿಷೇಧಿಸಲಾಗಿತ್ತು.
ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ಪಿ.ಎಸ್.ನರಸಿಂಹ ಅವರಿದ್ದ ಪೀಠವು ಈ ಸಂಬಂಧ ಐಐಟಿ ವರದಿಯನ್ನು ಗಣನೆಗೆ ತೆಗೆದುಕೊಂಡಿತು.
'ಪೇಪರ್ ಕಪ್‌ಗಳ ಬಳಕೆ ನಿಷೇಧಿಸಲು ವೈಜ್ಞಾನಿಕ ಆಧಾರವಿದೆ. ನಿಷೇಧ ಮಾಡಿರುವುದು ಸರ್ಕಾರದ ನೀತಿಯಾಗಿದ್ದು, ಇದರಲ್ಲಿ ಸಾರ್ವಜಜನಿಕ ಹಿತಾಸಕ್ತಿ ಇದೆ. ಈ ವಿಷಯದಲ್ಲಿ ಕೋರ್ಟ್ ಮಧ್ಯ ಪ್ರವೇಶಿಸುವುದಿಲ್ಲ ಎಂದು ಪೀಠ ಹೇಳಿತು.