ನವದೆಹಲಿ: 'ಆಪರೇಷನ್ ಅಜಯ್' ಕಾರ್ಯಾಚರಣೆಯ ಅಡಿಯಲ್ಲಿ ಇಸ್ರೇಲ್‌ನಿಂದ ಹೊರಟ ಆರನೇ ವಿಮಾನದಲ್ಲಿ ಇಬ್ಬರು ನೇಪಾಳ ಪ್ರಜೆಗಳು ಸೇರಿದಂತೆ 143 ಮಂದಿ ಭಾರತೀಯರು ತಾಯ್ನಾಡಿಗೆ ಬಂದಿಳಿದಿದ್ದಾರೆ.
0
samarasasudhi
ಅಕ್ಟೋಬರ್ 24, 2023
ನವದೆಹಲಿ: 'ಆಪರೇಷನ್ ಅಜಯ್' ಕಾರ್ಯಾಚರಣೆಯ ಅಡಿಯಲ್ಲಿ ಇಸ್ರೇಲ್‌ನಿಂದ ಹೊರಟ ಆರನೇ ವಿಮಾನದಲ್ಲಿ ಇಬ್ಬರು ನೇಪಾಳ ಪ್ರಜೆಗಳು ಸೇರಿದಂತೆ 143 ಮಂದಿ ಭಾರತೀಯರು ತಾಯ್ನಾಡಿಗೆ ಬಂದಿಳಿದಿದ್ದಾರೆ.
ದೆಹಲಿಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಫಗ್ಗನ್ ಸಿಂಗ್ ಕುಲಸ್ತೆ ಅವರು ಪ್ರಯಾಣಿಕರನ್ನು ಬರಮಾಡಿಕೊಂಡಿದ್ದಾರೆ.
ಇಸ್ರೇಲ್ -ಹಮಾಸ್ ಸಂಘರ್ಷದ ಹಿನ್ನೆಲೆಯಲ್ಲಿ ಸ್ವದೇಶಕ್ಕೆ ಮರಳಲು ಬಯಸುವ ಭಾರತೀಯರು ಇಸ್ರೇಲ್‌ನಿಂದ ಸ್ವದೇಶಕ್ಕೆ ಕರೆತರಲು ಭಾರತ 'ಆಪರೇಷನ್ ಅಜಯ್' ಕಾರ್ಯಾಚರಣೆಗೆ ಚಾಲನೆ ನೀಡಿತ್ತು.
'ಆಪರೇಷನ್ ಅಜಯ್' ಕಾರ್ಯಾಚರಣೆ ಅಡಿಯಲ್ಲಿ ಭಾರತೀಯರನ್ನು ಹೊತ್ತ 6ನೇ ವಿಮಾನ ದೆಹಲಿಗೆ ಬಂದಿಳಿದಿದೆ. ವಿಮಾನದಲ್ಲಿ ಇಬ್ಬರು ನೇಪಾಳ ಪ್ರಜೆಗಳು ಸೇರಿದಂತೆ 143 ಮಂದಿ ಪ್ರಯಾಣಿಕರು ಬಂದಿದ್ದಾರೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈವರೆಗೆ 1,200ಕ್ಕೂ ಹೆಚ್ಚು ಮಂದಿ ಭಾರತೀಯರು ಇಸ್ರೇಲ್‌ನಿಂದ ವಾಪಸ್ ಆಗಿದ್ದಾರೆ.