ಕಾಸರಗೋಡು: ಕೊರಕ್ಕೋಡು ಶ್ರೀ ದುರ್ಗಾಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸನ್ನಿಧಿಯಲ್ಲಿ ನಡೆದುಬರುತ್ತಿರುವ ನವರತ್ರಿ ಮಹೋತ್ಸವದ ಅಂಗವಾಗಿ ವಿದ್ಯಾರಂಭ ಕಾರ್ಯಕ್ರಮ ಅ. 24ರಂದು ಬೆಳಗ್ಗೆ 8ಕ್ಕೆ ನಡೆಯುವುದು. ದೇವಸ್ಥಾನದಲ್ಲಿ ಅ. 15ರಂದು ಆರಂಭಗೊಂಡಿರುವ ನವರತ್ರಿ ಮಹೋತ್ಸವ 24ರಂದು ರಆತ್ರಿ ಮಹಾಪೂಜೆ, ಮಂತ್ರಾಕ್ಷತೆಯೊಂದಿಗೆ ಸಂಪನ್ನಗೊಳ್ಳಲಿರುವುದು.
ಕುಂಜರಕಾನದಲ್ಲಿ ನವರಾತ್ರಿ ಮಹೋತ್ಸವ:
ಚೆರ್ಕಳ ಸನಿಹದ ಕುಂಜರಕಾನ ಶ್ರೀ ದುಗಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಅಂಗವಾಗಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘ ವತಿಯಿಂದ ಸಾಹಿತ್ಯ-ಗಾನ-ನೃತ್ಯ ವೈಭವ ಅ. 22ರಂದು ಮಧ್ಯಾಃನ 12ಕ್ಕೆ ದೇವಸ್ಥಾನದ ವೇದಿಕೆಯಲ್ಲಿ ಜರುಗಲಿದೆ. 23 ಹಾಗೂ 24ರಂದು ಮಧ್ಯಾಃನ 12ಕ್ಕೆ ನೃತ್ಯ ಕಾರ್ಯಕ್ರಮ ನಡೆಯುವುದು. ಅ. 23ರಂದುಬೆಳಗ್ಗೆ 7ರಿಂದ ವಾಹನ ಪೂಜೆ, 24ರಂದು ಬೆಳಗ್ಗೆ 8ರಿಂದ ವಿದ್ಯಾರಂಭ, ರಾತ್ರಿ ಶ್ರೀದೇವರಿಗೆ ಪಾಲಕ್ಕಿ ಉತ್ಸವ ನಡೆಯುವುದು.

