ಕಾಸರಗೋಡು: ತೆಕ್ಕಿಲ್ ಮಹಾಲಕ್ಷ್ಮೀಪುರಂ ಶ್ರೀ ಮಹಿಷಮರ್ದಿನೀ ಕನಕವಳಪ್ಪು ಶ್ರೀ ಧರ್ಮಶಾಸ್ತಾ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ ಅಂಗವಾಗಿ ನಡೆದುಬರುತ್ತಿರುವ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಶ್ರೀಹರಿ ಭಟ್ ಬೆಂಗಳೂರು ಮತ್ತು ಬಳಗದವರಿಂದ ಗಾಡುಗಾರಿಕೆ ಅ. 21ರಂದು ರಾತ್ರಿ 8ಕ್ಕೆ ನಡೆಯುವುದು. ವಯಲಿನ್ ನಲ್ಲಿ ಗುರುರಾಜ್ ಕಾರ್ಲೆ, ಮೃದಂಗದಲ್ಲಿ ವಸಂತ ಕಾಂಚನ, ಘಟಂನಲ್ಲಿ ಬಿ.ಜಿ ಈಶ್ವರ ಭಟ್ ಕಾಸರಗೋಡು ಸಹಕರಿಸುವರು. ಬೆಳಗ್ಗೆ 10.30ಕ್ಕೆ ಭಕ್ತಿ ಗಾನಸುಧಾ, ರಾತ್ರಿ 10ಕ್ಕೆ ನ್ರತ್ಯೋತ್ಸವ ನಡೆಯುವುದು.
23ರಂದು ಮಹಾನವಮಿ ಅಂಗವಾಗಿ ಆಯುಧ ಪೂಜೆ, ವಾಹನ ಪೂಜೆ, 24ರಂದು ವಿಜಯದಶಮಿ ಅಂಗವಾಗಿ ವಿದ್ಯಾರಂಭ ನಡೆಯುವುದು.
ಕಾಳ್ಯಂಗಾಡು ಕ್ಷೇತ್ರ:
ಕಾಸರಗೋಡು ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ವಿಶೇಷ ಹೂವಿನ ಪೂಜೆ, ಶ್ರೀ ಮೂಕಾಂಬಿಕಾ ಅಲಂಕಾರ ಪೂಜೆ, ಉತ್ಸವ ದರ್ಶನ ಬಲಿ ಅ. 21ರಂದು ಜರುಗಲಿದೆ. 22ರಂದು ರಾತ್ರಿ 9.30ಕ್ಕೆ ಶ್ರೀ ದುರ್ಗಾ ನಮಸ್ಕಾರ ಪೂಜೆ, 23ರಂದು ರಾತ್ರಿ 10ರಿಂದ ಶ್ರೀ ಅಮ್ಮನವರ ದೊಂದಿ ಸೇವೆ, ಶಕ್ತಿಪೂಜೆ, 24ರಂದು ಬೆಳಗ್ಗೆ 10ರಿಂದ ವಿಜಯದಶಮಿ, ವಿದ್ಯಾರಂಭ ನಡೆಯುವುದು.

