ಕಾಸರಗೋಡು: ನಗರದಿಂದ ಮಧೂರು ರಸ್ತೆಯ ಕರಂದಕ್ಕಾಡು ಮತ್ತು ಬಟ್ಟಂಪಾರು ನಡುವಿನ ರಸ್ತೆಬದಿಯಲ್ಲಿ ವಿದ್ಯುತ್ ಕಂಬಕ್ಕೆ ತಲೆ ಬಡಿದು ವಿದ್ಯಾರ್ಥಿ ದಾರುಣವಾಗಿ ಸಾವಿಗೀಡಾಗಲು ಪಿ.ಡಬ್ಲ್ಯೂ.ಡಿ. ಮತ್ತು ವಿದ್ಯುತ್ ಇಲಾಖೆ ನಿರ್ಲಕ್ಷ್ಯ ಕಾರಣ ಎಂದು ಕಾಸಗಿ ಬಸ್ ಮಾಲಿಕರ ಸಂಘ ಆರೋಪಿಸಿದೆ.
ಪ್ರಸಕ್ತ ರಸ್ತೆ ಅಭಿವೃದ್ಧಿಗೊಳಿಸುವ ಸಂದರ್ಭ ರಸ್ತೆ ಬದಿಯ ವಿದ್ಯುತ್ ಕಂಬಗಳನ್ನು ಬದಲಾಯಿಸಲು ಸಿದ್ಧರಾಗದಿರುವುದು ಅನಾಹುತಗಳಿಗೆ ಕಾರಣವಾಗಿದೆ. ಪಿಡಬ್ಲ್ಯೂಡಿ ಹಾಗೂ ವಿದ್ಯುತ್ ಇಲಾಖೆಗೆ ಈ ಬಗ್ಗೆ ದೂರು ನೀಡಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯಾರ್ಥಿಯ ಜೀವವೊಂದು ಬಲಿಯಾಗಬೇಕಾಯಿತು. ಈ ಮಗುವಿನ ಕುಟುಂಬಕ್ಕೆ ಸಂಬಂಧಪಟ್ಟ ಅಧಿಕಾರಿಗಳು 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಕಾಸರಗೋಡು-ಮಧೂರು ರಸ್ತೆಯಲ್ಲಿ ಅಪಾಯಕಾರಿಯಾಗಿರುವ ಹಾಗೂ ನಿರುಪಯುಕ್ತ ಟೆಲಿಫೆÇೀನ್ ಕಂಬಗಳನ್ನು ತೆರವುಗೊಳಿಸುವಂತೆ ಬಸ್ ಮಾಲಿಕರ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಗಿರೀಶ್ ಹೆಲಿಕೆಯಲ್ಲಿ ಒತ್ತಾಯಿಸಿದ್ದಾರೆ.

