ಕಾಸರಗೋಡು: ಕಾಸರಗೋಡು ಜಿಲ್ಲೆಯ ಪೆರಿಯ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಮೀಪದ ಅಳಕೋಡು ಗ್ರಾಮದ ಬೇಕಲ ಗೋಕುಲಂ ಗೋಶಾಲೆಯು ಮೂರನೇ ವರ್ಷದ ದೀಪಾವಳಿ ಸಂಗೀತೋತ್ಸವಕ್ಕೆ ಸಜ್ಜಾಗಿದೆ. ನವೆಂಬರ್ 10 ರಿಂದ 19 ರವರೆಗೆ ಬೆಳಿಗ್ಗೆ 9 ರಿಂದ ರಾತ್ರಿ 10ರ ತನಕ ನಡೆಯುವ ಉತ್ಸವದಲ್ಲಿ ಭಾರತ ಮತ್ತು ವಿದೇಶಗಳಿಂದ ಸುಮಾರು 300 ಸಂಗೀತಗಾರರು ಮತ್ತು 100 ನೃತ್ಯಗಾರರು ಭಾಗವಹಿಸಲಿದ್ದಾರೆ.
ವಿಶ್ವವಿಖ್ಯಾತ ಪಿಟೀಲು ವಾದಕ ಪದ್ಮಭೋಷÀಣ ಡಾ. ಎಲ್ ಸುಬ್ರಮಣ್ಯಂ, ಖ್ಯಾತ ನರ್ತಕಿ ಪದ್ಮಭೂಷಣ ಪದ್ಮ ಸುಬ್ರಮಣ್ಯಂ, ಖ್ಯಾತ ಹಿನ್ನೆಲೆ ಗಾಯಕ ಅನೂಪ್ ಶಂಕರ್, ಕರ್ನಾಟಕ ಸಂಗೀತ ವಿದ್ವಾಂಸರಾದ ಅಭಿಷೇಕ್ ರಘುರಾಮ್, ಪಟ್ಟಾಭಿರಾಮ ಪಂಡಿತ್, ಕುನ್ನಕುಡಿ ಬಾಲಮುರಳಿ, ಎನ್.ಜೆ.ನಂದಿನಿ, ಮೃದಂಗ ಮಾಂತ್ರಿಕ ಪಾತ್ರಿ ಸತೀಶ್ ಕುಮಾರ್, ಘಟಂ ಚಕ್ರವರ್ತಿ ಡಾ.ಸುರೇಶ್ ವೈದ್ಯನಾಥನ್ ಮತ್ತಿತರರು ಭಾಗವಹಿಸಲಿದ್ದಾರೆ. ಎಡನೀರು ಶ್ರೀಗಳು, ಉಡುಪಿ ಅದಮಾರು ಮಠಾಧೀಶರು, ಉಡುಪಿ ಪುತ್ತಿಗೆ ಮಠಾಧೀಶರು, ಸುಬ್ರಹ್ಮಣ್ಯ ಮಠಾಧೀಶರು, ಹಾಗೂ ಸಂಗೀತೋತ್ಸವದ ವೇಳೆ ಶ್ರೀರಾಮಚಂದ್ರಾಪುರ ಮಠದ ಶ್ರೀಗಳು ಗೋಶಾಲೆಗೆ ಭೇಟಿ ನೀಡಲಿದ್ದಾರೆ.
ಗೋಶಾಲೆಯಲ್ಲಿ ಸಂಗೀತೋತ್ಸವ :
ಗೋಶಾಲೆಯ ಮಧ್ಯದಲ್ಲಿ ವೇದಿಕೆ ನಿರ್ಮಿಸಲಾಗಿದ್ದು, ಸಭಾಸದರೊಂದಿಗೆ ಗೋವುಗಳೂ ಸಂಗೀತಾಸ್ವಾದನೆ ಮಾಡುವುದು ಇಲ್ಲಿನ ವಿಶೇಷತೆಯಾಗಿದೆ.





