ಮುಳ್ಳೇರಿಯ: ದೇಲಂಪಾಡಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಅಧ್ಯಯನ ಕೇಂದ್ರಕ್ಕೆ ಉದುಮ ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಂಬು ಶಾಸಕ ಭೇಟಿ ನೀಡಿದರು.
ಕಲಾಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿ ಮಂಜೇಶ್ವರ ಅವರು ಶಾಸಕರನ್ನು ಸ್ವಾಗತಿಸಿದರು. ಕೇರಳ ಸರ್ಕಾರದಿಂದ ಕಲಾ ಸಂಘದ ಬೆಳವಣಿಗೆಗೆ ಪೂರಕವಾಗಿ ಆರ್ಥಿಕ ಸಹಕಾರದ ಅನುದಾನವನ್ನು ಅಪೇಕ್ಷಿಸಿ ಮನವಿಯನ್ನು ಈ ಸಂದರ್ಭದಲ್ಲಿ ಶಾಸಕರಿಗೆ ಸಮರ್ಪಿಸಲಾಯಿತು.
ದೇಲಂಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ನ್ಯಾಯವಾದಿ. ಎ.ಪಿ. ಉಷಾ, ರಾಜಕೀಯ ಪಕ್ಷದ ಮುಖಂಡರಾದ ಎ.ಪಿ ಕುಶಲನ್ ಸಿ.ಪಿ.ಐ(ಎಂ), ಎ. ಅಪ್ಪಯ್ಯ ಮಣಿಯಾಣಿ, ಯು.ಬಿ ಶ್ರೀನಿಲಯ, ಕೆ. ಗೋಪಾಲಯ್ಯ, ವಿ.ವಿ ಬನಾರಿ, ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಮುಂತಾದವರು ಉಪಸ್ಥಿತರಿದ್ದರು.

.jpg)
