ಬದಿಯಡ್ಕ: ನವೆಂಬರ್ 19 ರಂದು ಕಾಸರಗೋಡು ವಿಧಾನಸಭಾ ಕ್ಷೇತ್ರದ ನವಕೇರಳ ಸಮಾವೇಶದ ಅಂಗವಾಗಿ ಗ್ರಾಮ ಪಂಚಾಯತಿ ಮಟ್ಟದ ಸಂಘಟನಾ ಸಮಿತಿ ಸಭೆ ಬದಿಯಡ್ಕ ಸಂಸ್ಕøತಿ ಭವನದಲ್ಲಿ ನಡೆಯಿತು.
ಕಾರಡ್ಕ ಬ್ಲಾಕ್ ಪಂಚಾಯತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಉದ್ಘಾಟಿಸಿದರು. ಬದಿಯಡ್ಕ ಗ್ರಾಮ ಪಂಚಾಯತಿ ಅಭಿವೃದ್ಧಿ ಕಾರ್ಯಗಳ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ರೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ವ್ಯವಸ್ಥಾಪಕ ಅಜಿತ್ ಕುಮಾರ್, ಎ.ಇ.ಒ ಶಶಿಧರ, ಅಧ್ಯಕ್ಷೆ ರಶೀದಾ ಹಮೀದ್, ಸದಸ್ಯೆ ಜ್ಯೋತಿ, ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಕಾಶ್ ಅಮ್ಮಣ್ಣಾಯ ಮಾತನಾಡಿದರು. ರವಿ ರೈ ಅಧ್ಯಕ್ಷರಾಗಿ, ಪಂಚಾಯತಿ ಕಾರ್ಯದರ್ಶಿ ರಾಜೇಂದ್ರ ಸಂಚಾಲಕರಾಗಿ ಸಂಘಟನಾ ಸಮಿತಿಯನ್ನು ರಚಿಸಲಾಯಿತು. ಜ್ಯೋತಿ, ರಶೀದಾ ಹಮೀದ್, ಪ್ರಕಾಶ್ ಅಮ್ಮಣ್ಣಾಯ, ಸುಧಾಕರನ್, ಅನಿತಾ ಕ್ರಾಸ್ತಾ, ರಾಜೇಶ್, ಶಮ್ನಿಶಾ, ಶಶಿಧರ ಎಂಬವರನ್ನು ಪದಾಧಿಕಾರಿಗಳಾಗಿ ನಿರ್ಧರಿಸಲಾಯಿತು. ಬದಿಯಡ್ಕ ಗ್ರಾಮ ಪಂಚಾಯತಿ ಕಾರ್ಯದರ್ಶಿ ಸಿ.ರಾಜೇಂದ್ರನ್ ಸ್ವಾಗತಿಸಿ, ಐ.ಸಿ.ಡಿ.ಎಸ್ ಮೇಲ್ವಿಚಾರಕಿ ಶಮ್ನಿಶಾ ವಂದಿಸಿದರು.

