ನಾಗ್ಪುರ: ಹಿಂದೂ ಧರ್ಮವು ಎಲ್ಲ ಧರ್ಮ, ಪಂಗಡಗಳನ್ನು ಗೌರವಿಸುತ್ತದೆ. ಆ ಕಾರಣದಿಂದಲೇ ಇಸ್ರೇಲ್-ಹಮಾಸ್‌ನಂತಹ ಯುದ್ಧದ ಪರಿಸ್ಥಿತಿ ಭಾರತದಲ್ಲಿ ಎಂದಿಗೂ ನಿರ್ಮಾಣವಾಗಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
0
samarasasudhi
ಅಕ್ಟೋಬರ್ 22, 2023
ನಾಗ್ಪುರ: ಹಿಂದೂ ಧರ್ಮವು ಎಲ್ಲ ಧರ್ಮ, ಪಂಗಡಗಳನ್ನು ಗೌರವಿಸುತ್ತದೆ. ಆ ಕಾರಣದಿಂದಲೇ ಇಸ್ರೇಲ್-ಹಮಾಸ್‌ನಂತಹ ಯುದ್ಧದ ಪರಿಸ್ಥಿತಿ ಭಾರತದಲ್ಲಿ ಎಂದಿಗೂ ನಿರ್ಮಾಣವಾಗಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350ನೇ ವರ್ಷಾಚರಣೆ ನಿಮಿತ್ತ ಶಾಲೆಯೊಂದರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಗವತ್ ಮಾತನಾಡಿದರು.
'ಈ ದೇಶದಲ್ಲಿ ಒಂದು ಧರ್ಮವಿದ್ದು, ಅದು ಇತರ ಎಲ್ಲ ಧರ್ಮಗಳ ನಂಬಿಕೆಗಳನ್ನು ಗೌರವಿಸುತ್ತಿದೆ. ಆ ಧರ್ಮವೇ ಹಿಂದೂ ಧರ್ಮ. ಇದು ಹಿಂದೂಗಳ ದೇಶ. ಅದರರ್ಥ ನಾವು ಇತರ ಧರ್ಮಗಳನ್ನು ತಿರಸ್ಕರಿಸುತ್ತೇವೆ ಎಂದಲ್ಲ. ಒಮ್ಮೆ ಹಿಂದೂ ಎಂದು ಹೇಳಿದರೆ ಮುಸಲ್ಮಾನರಿಗೂ ಇಲ್ಲಿ ರಕ್ಷಣೆ ಇದೆ ಎಂದು ಹೇಳುವ ಅಗತ್ಯವಿಲ್ಲ. ಹಿಂದೂಗಳಿಂದ ಮಾತ್ರ ಹೀಗಿರಲು ಸಾಧ್ಯ. ಭಾರತದಲ್ಲಿ ಮಾತ್ರ ಇದು ಸಾಧ್ಯ' ಎಂದರು.
'ಉಕ್ರೇನ್-ರಷ್ಯಾ , ಹಮಾಸ್-ಇಸ್ರೇಲ್ ಯುದ್ಧದ ಬಗ್ಗೆ ನಾವು ಕೇಳುತ್ತಿದ್ದೇವೆ. ಅಂತಹ ವಿಷಯಗಳಿಗೆ ನಮ್ಮ ದೇಶದಲ್ಲಿ ಎಂದೂ ಜಗಳವಾಗಿಲ್ಲ. ಶಿವಾಜಿ ಮಹಾರಾಜರ ಕಾಲದಲ್ಲಿ ಅಂತಹ ದಾಳಿಗಳು ನಡೆದಿದ್ದವು. ಆದರೆ ಅದಾದ ಮೇಲೆ ಯಾರೊಂದಿಗೂ ನಾವು (ಹಿಂದೂಗಳು) ಜಗಳವಾಡಿಲ್ಲ. ಅದಕ್ಕಾಗಿಯೇ ನಾವು ಹಿಂದೂಗಳು' ಎಂದು ಹೇಳಿದರು.