ತಂಬಾಕು ಸೇವನೆಯಿಂದಾಗಿ ಭಾರತ ಸೇರಿದಂತೆ ಏಳು ರಾಷ್ಟ್ರಗಳಾದ್ಯಂತ ಪ್ರತಿ ವರ್ಷವೂ 10.30 ಲಕ್ಷ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆಂದು ಲ್ಯಾನ್ಸೆಟ್ ಕ್ಲಿನಿಕಲ್ ಮೆಡಿಸಿನ್ ಜರ್ನಲ್ ಪ್ರಕಟಿಸಿದ ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.
0
samarasasudhi
ನವೆಂಬರ್ 20, 2023
ತಂಬಾಕು ಸೇವನೆಯಿಂದಾಗಿ ಭಾರತ ಸೇರಿದಂತೆ ಏಳು ರಾಷ್ಟ್ರಗಳಾದ್ಯಂತ ಪ್ರತಿ ವರ್ಷವೂ 10.30 ಲಕ್ಷ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆಂದು ಲ್ಯಾನ್ಸೆಟ್ ಕ್ಲಿನಿಕಲ್ ಮೆಡಿಸಿನ್ ಜರ್ನಲ್ ಪ್ರಕಟಿಸಿದ ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.
ಜಾಗತಿಕವಾಗಿ ಕ್ಯಾನ್ಸರ್ನಿಂದ ಸಂಭವಿಸುವ ಸಾವುಗಳ ಪೈಕಿ ಶೇ.50ಕ್ಕಿಂತಲೂ ಅಧಿಕ ಪ್ರಕರಣಗಳು ಭಾರತ, ಚೀನಾ, ಬ್ರಿಟನ್, ಬ್ರೆಝಿಲ್, ರಶ್ಯ, ಅಮೆರಿಕ ಹಾಗೂ ದಕ್ಷಿಣ ಆಫ್ರಿಕಾ ರಾಷ್ಟ್ರಗಳಲ್ಲಿ ವರದಿಯಾಗುತ್ತಿವೆ ಎಂದು ಸಂಶೋಧಕರು ಪತ್ತೆಹಚ್ಚಿದ್ದಾರೆ.
ಮದ್ಯಪಾನ, ಬೊಜ್ಜು, ಹ್ಯೂಮನ್ ಪ್ಯಾಪಿಲೊಮಾ ವೈರಸ್ (ಎಚ್ಪಿವಿ) ಸೋಂಕಿನಿಂದ ಉಂಟಾಗುವ ಕ್ಯಾನ್ಸರ್ಗಳಿಗೆ ವಿಶ್ವದಾದ್ಯಂತ ಹೆಚ್ಚು ಕಮ್ಮಿ 20 ಲಕ್ಷ ಮಂದಿ ಬಲಿಯಾಗುತ್ತಿದ್ದಾರೆಂದು ವರದಿ ಹೇಳಿದೆ.
ಕ್ಯಾನ್ಸರ್ ಕುರಿತ ಅಂತರರಾಷ್ಟ್ರೀಯ ಸಂಶೋಧನಾ ಏಜೆನ್ಸಿ (ಐಎಆರ್ಸಿ), ಕ್ವೀನ್ ಮೇರಿ ಯೂನಿವರ್ಸಿಟಿ ಆಫ್ ಲಂಡನ್ ( ಕ್ಯೂಎಂಯುಎಲ್) ಹಾಗೂ ಕಿಂಗ್ಸ್ ಕಾಲೇಜ್ ಲಂಡನ್ ಸಂಶೋಧಕರು ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದರು.
ಜಾಗತಿಕವಾಗಿ ಪ್ರತಿ ಎರಡು ನಿಮಿಷಗಳಿಗೆ ಸರಾಸರಿ ಒಬ್ಬರು ಗರ್ಭನಾಳದ ಕ್ಯಾನ್ಸರ್ ಸಾವನ್ನಪ್ಪುತ್ತಿದ್ದಾರೆ. ಈ ಸಾವುಗಳಲ್ಲಿ ಶೇ.90ರಷ್ಟು ಕಡಿಮೆ ಹಾಗೂ ಮಧ್ಯಮ ಆದಾಯದ ದೇಶಗಳಲ್ಲಿ ಸಂಭವಿಸುತ್ತವೆ. ಆದರೆ ಇವುಗಳನ್ನು ಸಮಗ್ರ ಸ್ಕ್ರೀನಿಂಗ್ ತಪಾಸಣೆ ಹಾಗೂ ಎಚ್ಪಿವಿ ಲಸಿಕೀಕರಣ ಕಾರ್ಯಕ್ರಮಗಳ ಮೂಲಗಕ ಗಣನೀಯವಾಗಿ ಕಡಿತಗೊಳಿಸಬಹುದಾಗಿದೆ ಎಂದು ಅಧ್ಯಯನ ತಂಡದ ಸದಸ್ಯರಲ್ಲೊಬ್ಬರಾದ ಓಫ್ಮ್ಯಾನ್ ಹೇಳಿದ್ದಾರೆ.
ವಿವಿಧ ರೀತಿಯ ಕ್ಯಾನ್ಸರ್ ರೋಗಗಳಿಗೆ ಕಾರಣವಾಗುವಂತಹ, ಆದರೆ ತಡೆಗಟ್ಟಬಹುದಾದಂತಹ ಅಪಾಯದ ಅಂಶಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಿವೆ ಎಂದರು.