HEALTH TIPS

ಕೆ.ಎಸ್.ಆರ್.ಟಿ.ಸಿ.ಗೆ ಹೊಸ ಬಲ: ಡೀಸೆಲ್ ಬಸ್ ಗಳು ವಿದ್ಯುತ್ ಗೆ ಪರಿವರ್ತನೆ

             ತಿರುವನಂತಪುರಂ: ಕೆ.ಎಸ್.ಆರ್.ಟಿ.ಸಿ. ಹೊಸ ಉಪಕ್ರಮಕ್ಕೆ ಸಿದ್ಧತೆ ನಡೆಸಿದೆ. ಸಿ.ಎನ್.ಜಿ. ಲಾಭದಾಯಕವಲ್ಲದ ಕಾರಣ, ಡೀಸೆಲ್ ಬಸ್‍ಗಳನ್ನು ವಿದ್ಯುತ್ ಆಗಿ ಪರಿವರ್ತಿಸಲು ಯೋಜಿಸಲಾಗಿದೆ.

               ತೀವ್ರ ಆರ್ಥಿಕ ಮುಗ್ಗಟ್ಟು ಎದುರಾದಾಗಲೂ ಕೆಎಸ್‍ಆರ್‍ಟಿಸಿ ಬಸ್ ಗೆ 20 ಲಕ್ಷ ರೂ.ವರೆಗೆ ಖರ್ಚು ಮಾಡಲು ಸಿದ್ಧವಾಗಿದೆ.

               ಮೊದಲ ಹಂತದಲ್ಲಿ ಹತ್ತು ವರ್ಷ ಹಳೆಯ ಬಸ್‍ಗಳನ್ನು ಇ-ವಾಹನಗಳಾಗಿ ಪರಿವರ್ತಿಸಲಾಗುವುದು. ಇಂಧನ ವೆಚ್ಚ ತಗ್ಗಿಸಲು ಕನಿಷ್ಠ 1000 ಬಸ್ ಗಳನ್ನು ಬದಲಿಸಲು ನಿರ್ಧರಿಸಲಾಗಿದೆ. ಇ-ವಾಹನಗಳ ಗರಿಷ್ಠ ಉಪಯುಕ್ತ ವ್ಯಾಲಿಡಿಟಿ ನಿಗದಿಪಡಿಸಲಾಗಿಲ್ಲ. ಕೆಎಸ್‍ಆರ್‍ಟಿಸಿ 15 ವರ್ಷ ಹಳೆಯ ಡೀಸೆಲ್ ಬಸ್‍ಗಳನ್ನು ರದ್ದು ಮಾಡುತ್ತಿತ್ತು. ಡೀಸೆಲ್ ಬಸ್‍ಗಳಲ್ಲಿ ಎಂಜಿನ್ ಬದಲಾಯಿಸಿದ ನಂತರ ಮೋಟಾರ್, ಬ್ಯಾಟರಿ ಮತ್ತು ನಿಯಂತ್ರಣ ಘಟಕವನ್ನು ಅಳವಡಿಸಲಾಗುತ್ತದೆ. ರಾಜ್ಯದ ಸ್ಟಾರ್ಟ್ ಅಪ್ ಆಗಿರುವ ಹಿಂದೂಸ್ತಾನ್ ಇವಿ ಮೋಟಾರ್ಸ್ ಜೊತೆಗೆ ಇನ್ನೂ ಮೂರು ವಿದೇಶಿ ಒಡೆತನದ ಕಂಪನಿಗಳನ್ನು ಸಂಪರ್ಕಿಸಲಾಗಿದೆ.

             ಬ್ಯಾಟರಿ ವ್ಯವಸ್ಥೆಯು ಒಂದು ಬಾರಿ ಚಾರ್ಜ್ ಮಾಡಿದರೆ 120 ಕಿ.ಮೀ ವರೆಗೆ ಸಂಚರಿಸಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಕೆಎಸ್‍ಆರ್‍ಟಿಸಿ ಬ್ಯಾಟರಿಗಳನ್ನು ಬದಲಾಯಿಸುವ ನಿಟ್ಟಿನಲ್ಲೂ ಷರತ್ತು ವಿಧಿಸಿದೆ. ಬ್ಯಾಟರಿಗಳನ್ನು ಚಾರ್ಜ್ ಮಾಡಿ ನಿಲ್ದಾಣಗಳಲ್ಲಿ ಶೇಖರಿಸಿಟ್ಟರೆ ಸಮಯ ವ್ಯರ್ಥ ಮಾಡದೆ ಬಸ್ ಗಳಿಗೆ ತ್ವರಿತವಾಗಿ ಬ್ಯಾಟರಿಗಳನ್ನು ಜೋಡಿಸಬಹುದು ಎಂದು ಅಂದಾಜಿಸಲಾಗಿದೆ. ಅಂತಹ ಬಸ್ಸುಗಳನ್ನು ನಗರಗಳಿಗೆ ಪರಿಗಣಿಸಲಾಗುತ್ತದೆ. ಆದರೆ ಸುಮಾರು ಎರಡು ಟನ್ ತೂಕದ ಬ್ಯಾಟರಿ ಬದಲಾಯಿಸುವುದು ಪ್ರಾಯೋಗಿಕವಲ್ಲ ಎನ್ನುತ್ತಾರೆ ತಜ್ಞರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries