HEALTH TIPS

ಡೀಪ್‌ ಫೇಕ್‌ನಿಂದ ಸಮಾಜದಲ್ಲಿ ದೊಡ್ಡ ಬಿಕ್ಕಟ್ಟು: ಪ್ರಧಾನಿ ಮೋದಿ

                 ವದೆಹಲಿ: 'ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲ್ಪಟ್ಟ ಡೀಪ್‌ ಫೇಕ್‌ಗಳು ಸಮಾಜದಲ್ಲಿ ದೊಡ್ಡ ಬಿಕ್ಕಟ್ಟಿಗೆ ಕಾರಣವಾಗಬಹುದು ಮತ್ತು ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡಬಹುದು' ಎಂದು ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದರು.

              ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ 'ದೀಪಾವಳಿ ಮಿಲನ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಡೀಪ್‌ ಫೇಕ್‌ಗಳು ನಮ್ಮಂತಹ ವೈವಿಧ್ಯಮಯ ಸಮಾಜದಲ್ಲಿ ಅಸಮಾಧಾನದ ಕಿಡಿಯನ್ನು ಹೊತ್ತಿಸಬಹುದು.

               ಇದರ ಬಗ್ಗೆ ಪರಿಶೀಲಿಸಲು ಸಮಾಜದ ಬಹುಪಾಲು ಜನ ಯಾವುದೇ ವ್ಯವಸ್ಥೆಯನ್ನು ಹೊಂದಿಲ್ಲ. ಹಾಗಾಗಿ, ಜನರು ಇಂತಹ ವಿಡಿಯೊಗಳನ್ನು ನಂಬುತ್ತಾರೆ. ತಂತ್ರಜ್ಞಾನದ ದುರುಪಯೋಗದ ಬಗ್ಗೆ ಮಾಧ್ಯಮಗಳು ಜಾಗೃತಿ ಮೂಡಿಸಬೇಕು ಹಾಗೂ ಜನರಿಗೆ ಶಿಕ್ಷಣ ನೀಡಬೇಕು' ಎಂದು ಸಲಹೆ ನೀಡಿದರು.

                ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ ಫೇಕ್‌ ವಿಡಿಯೊ ಒಂದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಇತ್ತೀಚೆಗೆ ಹರಿಬಿಡಲಾಯಿತು. ಬಳಿಕ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ಡೀಪ್‌ ಫೇಕ್ ಚಿತ್ರವೊಂದನ್ನು ಹಂಚಿಕೊಳ್ಳಲಾಯಿತು. ಈ ಬಗ್ಗೆ ಪ್ರಸ್ತಾಪಿಸಿದ ಮೋದಿ ಅವರು, 'ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಜನರಿಗೆ ಇಂತಹ ಆನ್‌ಲೈನ್‌ ವಿಷಯಗಳನ್ನು ಪರಿಶೀಲಿಸಲು ಯಾವುದೇ ವಿಧಾನಗಳು ಇರುವುದಿಲ್ಲ' ಎಂದರು.

              'ನಾನು ಕೊನೆಯ ಬಾರಿಗೆ ಗರ್ಬಾ ನೃತ್ಯ ಮಾಡಿದ್ದು ಶಾಲಾ ವಿದ್ಯಾರ್ಥಿಯಾಗಿದ್ದಾಗ. ಆದರೆ, ನಾನು ಗರ್ಬಾ ನೃತ್ಯ ಮಾಡುತ್ತಿರುವ ನಕಲಿ ವಿಡಿಯೊ ಇತ್ತೀಚೆಗೆ ಹರಿದಾಡುತ್ತಿದೆ. ಆ ವಿಡಿಯೊದ ಸತ್ಯಾಸತ್ಯತೆ ಅರಿಯದೆ ನನ್ನನ್ನು ಪ್ರೀತಿಸುವವರು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಾರೆ' ಎಂದು ನಗುತ್ತಾ ಲಘುವಾಗಿ ಹೇಳಿದರು.

                'ವಿವಾದಾತ್ಮಕ ಹೇಳಿಕೆಗಳನ್ನು ಒಳಗೊಂಡಿರುವ ಚಿತ್ರಗಳು ಈ ಹಿಂದೆ ಬರುತ್ತಿದ್ದವು ಹಾಗೂ ಹೋಗುತ್ತಿದ್ದವು. ಆದರೆ, ದೊಡ್ಡ ವಿಷಯಗಳು ಆಗುತ್ತಿರಲಿಲ್ಲ. ಆದರೆ, ಈಗ ಅದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಇಂತಹ ಚಿತ್ರಗಳ ನಿರ್ಮಾಣಕ್ಕೆ ಅಪಾರ ಪ್ರಮಾಣದ ಹಣ ವ್ಯಯಿಸಿದರೂ ಕೂಡ ಸಮಾಜದ ಕೆಲವು ವರ್ಗಕ್ಕೆ ಅಗೌರವ ತೋರಿದ ಕಾರಣಕ್ಕೆ ಪ್ರದರ್ಶನ ಕಷ್ಟವಾಗುತ್ತಿದೆ' ಎಂದು ಅವರು ಹೇಳಿದರು.

                 'ಚಾಟ್‌ಜಿಪಿಟಿ ಸಂಸ್ಥಾಪಕರು ಇತ್ತೀಚೆಗೆ ನನ್ನನ್ನು ಭೇಟಿಯಾದಾಗ ತಂತ್ರಜ್ಞಾನ ಕೂಡ ಕೆಡುಕನ್ನು ಉಂಟುಮಾಡಬಲ್ಲುದು ಎಂದಿದ್ದೆ. ಅದನ್ನು ಅವರೂ ಒಪ್ಪಿಕೊಂಡಿದ್ದರು' ಎಂದು ಪ್ರಧಾನಿ ಹೇಳಿದರು.

                    2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ಮಾಡುವ ತಮ್ಮ ಸಂಕಲ್ಪದ ಬಗ್ಗೆ ಪ್ರಸ್ತಾಪಿಸಿದ ಅವರು, 'ಇದು ಕೇವಲ ಪದವಲ್ಲ. ಇದು ನೆಲ ಕಾಣಲಿರುವ ವಾಸ್ತವ' ಎಂದರು.

ದೀಪಾವಳಿಯ ವಾರವೊಂದರಲ್ಲಿ ಸುಮಾರು ₹4.5 ಲಕ್ಷ ಕೋಟಿ ವ್ಯವಹಾರ ನಡೆದಿರುವುದನ್ನು ಉಲ್ಲೇಖಿಸಿದ ಅವರು, 'ಸ್ಥಳೀಯರ ಧ್ವನಿ ಅಭಿಯಾನಕ್ಕೆ ಜನಬೆಂಬಲ ಸಿಕ್ಕಿದೆ' ಎಂದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries