ಕಾಸರಗೋಡು: ಅಂತಾರಾಷ್ಟ್ರೀಯ ಮಧುಮೇಹ ದಿನಾಚರಣೆ ಅಂಗವಾಗಿ ಜಾಗೃತಿ ನಡಿಗೆ ಕಾರ್ಯಕ್ರಮ ಕಾಸರಗೋಡಿನಲ್ಲಿ ಜರುಗಿತು.ಕಾಸರಗೋಡು. ಐಎಂಎ ಕಾಸರಗೋಡು ಶಾಖೆ, ರೋಟರಿ ಕ್ಲಬ್, ಡಿ ಐ ಎ ಲೈಫ್, ಐಎಪಿ ಕಾಸರಗೋಡು ವತಿಯಿಂದ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾಸರಗೋಡು ರೋಟರಿ ಭವನ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಐಎಂಎ ಕಾಸರಗೋಡು ಶಾಖೆಯ ಅಧ್ಯಕ್ಷ ಡಾ, ಜಿತೇಂದ್ರ ರೈ ನಡಿಗೆಗೆ ಚಾಲನೆ ನೀಡಿದರು. ಎಂಎ ಕಾರ್ಯದರ್ಶಿ ಡಾ. ಪ್ರಜ್ಯೋತ್ ಶೆಟ್ಟಿ, ಡಾ, ಖಾಸಿಂ, ಡಾ. ನಾರಾಯಣ ನಾಯಕ್, ಡಾ. ಗಣೇಶ್ ಮೈಯ್ಯ, ಗೋಪಾಲಕೃಷ್ಣ ಭಟ್, ಡಾ. ಜ್ಯೋತಿ, ರೇಖಾ ರೈ, ತೇಜಸ್ವಿ, ನೌಫಲ್, ಗೋಕುಲ್ ಚಂದ್ರ ಭಟ್, ಮುರಳೀಧರ ಕಾಮತ್, ಎಂ. ಟಿ. ದಿನೇಶ್, ಸಿ. ಎ. ವಿಶಾಲ್ ಕುಮಾರ್, ನಿಹಾನ್ ಜಾಯ್, ಎಂ. ಕೆ. ರಾಧಾಕೃಷ್ಣನ್ ಸಾಮೂಹಿಕ ನಡಿಗೆಗೆ ನೇತೃತ್ವ ನೀಡಿದರು.


