ಕಾಸರಗೋಡು: ಜಿಲ್ಲೆಯಲ್ಲಿ ನವೆಂಬರ್ 18 ಮತ್ತು 19ರಂದು ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಹಾಗೂ ಇಪ್ಪತ್ತು ಮಂದಿ ಸಚಿವರ ನೇತೃತ್ವದಲ್ಲಿ ನಡೆಯಲಿರುವ ನವಕೇರಳ ಸಮಾವೇಶದ ಅಂಗವಾಗಿ ವಾಹನದ ಮೂಲಕ ವಿಡಿಯೋ ಪ್ರಚಾರಕ್ಕೆ ಚಾಲನೆ ನೀಡಲಾಯಿತು.
ವಿದ್ಯಾನಗರದ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಕೆ.ಇನ್‍ಬಾಶೇಖರ್ ಫ್ಲಾಗ್ ಆಫ್ ಮೂಲಕ ವಾಹನಕ್ಕೆ ಚಾಲನೆ ನೀಡಿದರು. ಎ.ಡಿ.ಎಂ ಕೆ.ನವೀನ್ ಬಾಬು, ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್, ವಿವಿಧ ಇಲಾಖೆಗಳ ಮುಖ್ಯಸ್ಥರು, ನೌಕರರು ಭಾಗವಹಿಸಿದ್ದರು. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ವಾಹನ ಸಂಚಾರ ನಡೆಸಲಿದೆ. ವಾಹನದ ಮೂಲಕ ರಾಜ್ಯ ಸರ್ಕಾರದ ಅಭಿವೃದ್ಧಿ ಸಾಧನೆಗಳ ಕುರಿತು ಮಾಡಿದ ವಿಡಿಯೋ ಹಾಗೂ ಜಿಲ್ಲೆಯ ನವಕೇರಳ ವೇದಿಕೆಯ ವಿವರಗಳ ಬಗ್ಗೆ ಮಾಡಿದ ವೀಡಿಯೋ ಪ್ರದರ್ಶಿಸಲಾಗುತ್ತಿದೆ.


