ಕಾಸರಗೋಡು: ಜಿಲ್ಲೆಯಲ್ಲಿ ಸಂಪೂರ್ಣ ಡಿಜಿಟಲೀಕರಣವನ್ನು ಅನುಷ್ಠಾನಗೊಳಿಸಲು ಜಿಲ್ಲಾಡಳಿತ ಮತ್ತು ಐಟಿ ಮಿಷನ್ ಸಹಯೋಗದಲ್ಲಿ ಕನೆಕ್ಟಿಂಗ್ ಕಾಸರಗೋಡು ಯೋಜನೆಯ ಮೊದಲ ಸಭೆ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆಯಿತು.
ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಇಲಾಖೆಯ ಮುಖ್ಯಸ್ಥರು ಭಾಗವಹಿಸಿದ್ದರು. ಜಿಲ್ಲಾ ಐಟಿ ಮಿಷನ್ ಸಂಯೋಜಕ ಕಪಿಲ್ ದೇವ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಯೋಜನೆಗೆ ನೋಡಲ್ ಅಧಿಕಾರಿಯಾಗಿ ತಹಸೀಲ್ದರ್ ಪಿ.ಶಿಬು (ಆರ್ ಆರ್)ಅವರನ್ನು ಆಯ್ಕೆ ಮಾಡಲಾಯಿತು. ಜಿಲ್ಲೆಯ ಎಲ್ಲಾ ಸರ್ಕಾರಿ ಸೇವೆಗಳನ್ನು ಡಿಜಿಟಲೀಕರಣಗೊಳಿಸುವುದು ಮತ್ತು ಕಾಗದ ರಹಿತ ಆಡಳಿತ ಪ್ರಕ್ರಿಯೆಗೆ ಬದಲಾಯಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರು ತಮ್ಮ ಸಂಪೂರ್ಣ ದಾಖಲೆಗಳನ್ನು ಡಿಜಿ ಲಾಕರ್‍ಗೆ ವರ್ಗಾಯಿಸಬಹುದು ಮತ್ತು ಆ ಮೂಲಕ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

