HEALTH TIPS

ದೇರಾಜೆ ಸೀತಾರಾಮಯ್ಯ ನೆನಪು ನೂರೆಂಟು' ಸಂಸ್ಮರಣಾ ಗ್ರಂಥ ಮತ್ತು 'ರಸಋಷಿ' ಅಭಿನಂದನಾ ಗ್ರಂಥ ಬಿಡುಗಡೆ

 

           

                 ಕಾಸರಗೋಡು: ದೇರಾಜೆ ಸೀತಾರಾಮಯ್ಯ ಸಂಸ್ಮರಣ ಸಮಿತಿಯ ನೇತೃತ್ವದಲ್ಲಿ ಸಿದ್ದಗೊಂಡ 'ದೇರಾಜೆ ಸೀತಾರಾಮಯ್ಯ ನೆನಪು ನೂರೆಂಟು' ಎಂಬ ಸಂಸ್ಮರಣಾ ಗ್ರಂಥ ಮತ್ತು ಮರು ಮುದ್ರಣಗೊಂಡ  ದೇರಾಜೆ ಅಭಿನಂಧನಾ ಗ್ರಂಥ'ರಸಋಷಿ'ಯ ಲೋಕಾರ್ಪಣೆ ಕಾರ್ಯಕ್ರಮ ಶ್ರೀ ಎಡನೀರು ಮಠದ ಆಶ್ರಯದಲ್ಲಿ ಮತ್ತು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಟಾನದ ಸಂಯೋಜನೆಯಲ್ಲಿ ಶ್ರೀಮಠದಲ್ಲಿ ಜರುಗಿತು. .

                      ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕ್ರತಿಗಳನ್ನು ಲೋಕಾರ್ಪಣೆಗೊಳಿಸಿ ಅನುಗ್ರಹ ಸಂದೇಶ ನೀಡಿದರು. ದೇರಾಜೆ ಸೀತಾರಾಮಯ್ಯನವರು ಓರ್ವ ಅಪರೂಪದ ಕಲಾವಿದ. ಭಾವನಾತ್ಮಕ ಮತ್ತು ಮಾನವೀಯ ನೆಲಗಟ್ಟಿನಲ್ಲಿ ಯಾವುದೇ ಪಾತ್ರಕ್ಕೂ ಅರ್ಥ ಹೇಳುವ ಸಾಮಥ್ರ್ಯ ಹೊಂದಿದ್ದ ಶ್ರೇಷ್ಠ ಕಲಾವಿದರಾಗಿದ್ದರು. ದೇರಾಜೆಯವರ ಕುರಿತಾದ ಗ್ರಂಥ ಲೋಕಾರ್ಪಣೆ ಶ್ರೀ ಮಠದಲ್ಲೇ ನಡೆಯುವಂತಾದುದು  ಸಂತಸದ ವಿಚಾರ ಎಂದು ತಿಳಿಸಿದರು. 

                  ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ. ಟಿ. ಶ್ಯಾಮಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ,  ದೇರಾಜೆಯವರು ಜ್ಞಾನಪೀಠ ಪ್ರಶಸ್ತಿಗೆ ಎಲ್ಲಾ ರೀತಿಯಲ್ಲೂ ಅರ್ಹರಾಗಿದ್ದ ಕಲಾವಿದರಾಗಿದ್ದರು.  ಅವರ ಅರ್ಥಗಾರಿಕೆ ವಿಶಿಷ್ಟ ಮತ್ತು ವಿಭಿನ್ನ ಎಂದು ಅವರು ನುಡಿದರು.

                ಹಿರಿಯ ಅರ್ಥದಾರಿ, ದೇರಾಜೆ ಶಿಷ್ಯ ಶ್ರೀ ಉಡುವೆಕೋಡಿ ಸುಬ್ಬಪ್ಪಯ್ಯನವರು ದೇರಾಜೆ ಸಂಸ್ಮರಣಾ ಭಾಷಣ ಮಾಡಿದರು.ದೇರಾಜೆ ಸಂಸ್ಮರಣ ಸಮಿತಿಯ ಅಧ್ಯಕ್ಷ  ಜಿ.ಕೆ. ಭಟ್ ಸೇರಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರಂಥದ ಕುರಿತಾಗಿ ಸಂಪಾದಕ ಶ್ರೀಕರ ಭಟ್ ಮರಾಟೆ ಉಪಸ್ಥಿತರಿದ್ದರು. ಈ ಸಂದರ್ಭ ಗ್ರಂಥ ರಚನಾ ಕಾರ್ಯದಲ್ಲಿ ಸಹಕರಿಸಿದ ಜಯರಾಮ ಅಳಿಕೆ, ಕೊಕ್ಕಡ ವೆಂಕಟರಮಣ ಭಟ್ ಇವರನ್ನು ಸನ್ಮಾನಿಸಲಾಯಿತು.

                ಪ್ರಸಿದ್ಧ ಅರ್ಥಧಾರಿ, ಸಾಹಿತಿ ಮತ್ತು ದೇರಾಜೆಯವರ ನಿಕಟ  ಸಂಬಂಧಿ ರಾಧಾಕೃಷ್ಣ ಕಲ್ಚಾರ್ ಸ್ವಾಗತಿಸಿದರು. ಕಲಾವಿದ ಹರೀಶ ಬಳoತಿಮೊಗರು ಕಾರ್ಯಕ್ರಮ ನಿರೂಪಿಸಿದರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಟಾನದ ಅಧ್ಯಕ್ಷ ಶ್ರೀ ರಾಮಕೃಷ್ಣ ಮಯ್ಯ ವಂದಿಸಿದರು. ನೀಹಾರಿಕ ದೇರಾಜೆ ಪ್ರಾರ್ಥನಾ ಗೀತೆ ಹಾಡಿದರು.

           ಕಾರ್ಯಕ್ರಮದ ಅಂಗವಾಗಿ ದಿವಾಕರ ಹೆಗಡೆ ಅವರಿಂದ 'ಕನಕ ಜಾನಕಿ' ಎಂಬ ಏಕವ್ಯಕ್ತಿ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ ಯೆಲ್ಲಾಪುರ ಹಾಗೂ ಮದ್ದಳೆಯಲ್ಲಿ ಎ. ಪಿ. ಪಾಠಕ್ ಅವರು ಸಹಕರಿಸಿದರು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries