ಕಾಸರಗೋಡು: ಸಾಂಸ್ಕøತಿಕವಾಗಿ ಅತ್ಯಂತ ಸಂಪನ್ನವಗಿರುವ ಕಾಸರಗೋಡಿನಲ್ಲಿ ಇಲ್ಲಿನ ಸಮುದಾಯ, ಭಾಷೆ, ಕಲೆ ಮತ್ತು ಸಂಸ್ಕøತಿಗಳ ಕುರಿತಾದ ಅಧ್ಯಯನಕ್ಕೆ ವಿಪುಲವಅವಕಾಶಗಳಿರುವುದಾಗಿ ದೆಹಲಿಯ ಅಮೇರಿಕನ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ನಿರ್ದೇಶಕ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಅವರು ಕಾಸರಗೋಡು ಸರ್ಕಾರಿ ಕಾಲೇಜಿನ ಸಭಾಂಗಣದಲ್ಲಿ ಕನ್ನಡಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಆಶ್ರಯದಲ್ಲಿ `ಕಾಸರಗೋಡಿನ ಸಾಂಸ್ಕøತಿಕ ವೈವಿಧ್ಯ ಎಂಬ ವಿಷಯದಲ್ಲಿ ನಡೆಯುತ್ತಿರುವ ಮೂರು ದಿವಸಗಳ ಅಂತಾರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕಾಸರಗೋಡು ಕೇರಳ ಮತ್ತು ಕರ್ನಾಟಕದ ಇತರ ಭೂಪ್ರದೇಶಗಳಿಗಿಂತ ಹೆಚ್ಚು ಪ್ರಾಚೀನವಾಗಿದೆ. ತಮಿಳಿನ ಪ್ರಾಚೀನ `ಶಿಲಪ್ಪದಿಕಾರಂ ಕೃತಿಯಲ್ಲಿ ಕಾಸರಗೋಡಿನ ಉಲ್ಲೇಖವಿದೆ. ಈ ಪ್ರದೇಶದಲ್ಲಿ ಬುಡಕಟ್ಟು ಸಂಸ್ಕøತಿ, ಜಾತಿ ಸಮಾಜ ಮತ್ತು ವಿವಿಧ ಪಂಥಗಳು ಇಂದಿಗೂ ಸಜೀವವಾಗಿವೆ ಎಂದು ತಿಳಿಸಿದರು.
ಕಾಲೇಜು ಪ್ರಾಂಶುಪಾಲ ಡಾ.ಅನಿಲ್ ಕುಮಾರ್.ವಿ.ಎಸ್ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಡಾ.ಅನಂತಪದ್ಮನಾಭ ಎ.ಎಲ್, ಆಂತರಿಕ ಗುಣಮಟ್ಟ ಮತ್ತು ಮೌಲ್ಯಮಾಪನ ಸಮಿತಿಯ ಸಂಯೋಜಕ ಡಾ.ಜಿಜೋ ಉಲಹನ್ನನ್, ಕಣ್ಣೂರು ವಿ.ವಿ. ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಡಾ.ಶ್ರೀಧರ ಎನ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಪ್ರೇಮ್‍ಜಿತ್.ಎ, ಕನ್ನಡ ಸಂಘದ ಕಾರ್ಯದರ್ಶಿ ಅನಿರುದ್ಧ ಭಟ್ ಉಪಸ್ಥಿತರಿದ್ದರು. ಶ್ರೀವಾಣಿ ಕಾಕುಂಜೆ ಪ್ರಾರ್ಥನೆ ಹಾಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಸುಜಾತ ಎಸ್ ಸ್ವಾಗತಿಸಿದರು. ವಿಚಾರ ಸಂಕಿರಣದ ಸಂಯೋಜಕ ಡಾ.ಬಾಲಕೃಷ್ಣ ಬಿ.ಎಂ. ಕಾರ್ಯಕ್ರಮ ನಿರೂಪಿಸಿದರು.
ವಿಚಾರಸಂಕಿರಣದ ವಿವಿಧ ಗೋಷ್ಠಿಗಳಲ್ಲಿ ಡಾ.ಕೆ.ಕಮಲಾಕ್ಷ, ಡಾ.ಕೆ.ಕಣ್ಣನ್, ಡಾ.ಯು.ಮಹೇಶ್ವರಿ, ಡಾ.ಬಸವರಾಜ ಕೋಡಗಂಟಿ, ಡಾ.ಧನಂಜಯ ಕುಂಬಳೆ ಅವರು ವಿಷಯ ಮಂಡಿಸಿದರು. ಶ್ರೀವಾಣಿ ಕಾಕುಂಜೆ ಅವರಿಂದ ಪ್ರಾಚೀನ ತುಳು ಕಾವ್ಯ ವಾಚನದ ಪ್ರಾತ್ಯಕ್ಷಿಕೆ ನಡೆಯಿತು. ನಾಲ್ಕನೇ ಗೋಷ್ಠಿಯಲ್ಲಿ ಡಾ.ತೆನ್ನರಸು, ಮಹಮ್ಮದಾಲಿ ಕೆ, ಡಾ.ಚಂದನ ಕೆ.ಎಸ್, ಚಂದ್ರಶೇಖರ ಚೌಗಲೆ, ರಚನಾ ಫಡ್ಕೆ ವಿವಿಧ ವಿಷಯಗಳಲ್ಲಿ ಪ್ರಬಂಧ ಮಂಡಿಸಿದರು. ನವೀನ ಕುಮಾರ್ ಪುತ್ತೂರು, ರಾಜೇಶ ಬಿ.ಆಚಾರ್ಯ, ಕರಣ್ ಆಚಾರ್ಯ, ನೀರಜ್ ಹರಿ, ರಚನಾ ಫಡ್ಕೆ ಮುಂತಾದ ಕಲÁವಿದರ ಚಿತ್ರ ಪ್ರದರ್ಶನ ನಡೆಯಿತು. ರಂಗೋಲಿ, ಪೂಕಳಂ, ಗೂಡುದೀಪಗಳ ಪ್ರದರ್ಶನ ನಡೆಯಿತು.

