HEALTH TIPS

ಪಾಕಿಸ್ತಾನ, ನ್ಯೂ ಗಿನಿಯಾ, ಕ್ಸಿಜಾಂಗ್‌ನಲ್ಲಿ ಪ್ರಬಲ ಭೂಕಂಪ

               ಸ್ಲಾಮಾಬಾದ್: ಪಾಕಿಸ್ತಾನದಲ್ಲಿ ರಿಕ್ಟರ್‌ ಮಾಪಕದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

                 ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್‌) ಪ್ರಕಾರ, 'ಪಾಕಿಸ್ತಾನದಲ್ಲಿ ಇಂದು (ಮಂಗಳವಾರ) ನಸುಕಿನ ಜಾವ 3:38ಕ್ಕೆ ಭೂಕಂಪ ಸಂಭವಿಸಿದೆ.


                 10 ಕಿ.ಮೀ ಆಳವಿರುವ ಭೂಕಂಪದ ಕೇಂದ್ರ 34.66 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 73.51 ಡಿಗ್ರಿ ಪೂರ್ವ ರೇಖಾಂಶದಲ್ಲಿದೆ. ಈವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ' ಎಂದು ಎನ್‌ಸಿಎಸ್‌ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

              ಪಾಕಿಸ್ತಾನಕ್ಕೆ ಅಪ್ಪಳಿಸುವ ಕೆಲ ನಿಮಿಷಗಳ ಮೊದಲು ನ್ಯೂ ಗಿನಿಯಾದ ಉತ್ತರ ಕರಾವಳಿ ಬಳಿ ರಿಕ್ಟರ್‌ ಮಾಪಕದಲ್ಲಿ 6.5 ತೀವ್ರತೆಯ ಭೂಕಂಪ ಸಂಭವಿಸಿದೆ. ಇಂದು ಮುಂಜಾನೆ 3:16ರ ಸುಮಾರಿಗೆ ಸಂಭವಿಸಿದ ಭೂಕಂಪದ ಕೇಂದ್ರ 10 ಕಿ.ಮೀ ಆಳದಲ್ಲಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಹೇಳಿದೆ.

              ಕ್ಸಿಜಾಂಗ್‌ನಲ್ಲಿ ಮುಂಜಾನೆ 3:45‌ಕ್ಕೆ 5.0 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರ 140 ಕಿ.ಮೀ ಆಳದಲ್ಲಿದೆ ಎನ್‌ಸಿಎಸ್‌ ವರದಿ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries