HEALTH TIPS

ಉತ್ತರಕಾಶಿ : ಸಿಲ್ಕ್ಯಾರಾ ಸುರಂಗ ಕುಸಿತ: ಲಂಬಾಕಾರವಾಗಿ ರಂಧ್ರ ಕೊರೆಯಲು ಸಿದ್ಧತೆ

               ತ್ತರಕಾಶಿ : ಇಲ್ಲಿನ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಮಂದಿ ಕಾರ್ಮಿಕರ ರಕ್ಷಣೆಗಾಗಿ ಭಾನುವಾರವೂ ಕಾರ್ಯಾಚರಣೆ ಮುಂದುವರಿದಿದ್ದು, ಲಂಬಾಕಾರವಾಗಿ ರಂಧ್ರ ಕೊರೆಯುವ ಉದ್ದೇಶದಿಂದ ಸುರಂಗದ ಮೇಲಿನ ಬೆಟ್ಟದ ತುದಿಗೆ ರಸ್ತೆ ನಿರ್ಮಿಸಲಾಗುತ್ತಿದೆ.

             ಗಡಿ ರಸ್ತೆ ಸಂಸ್ಥೆಯ (ಬಿಆರ್‌ಒ) ಸಿಬ್ಬಂದಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ನಿಯಂತ್ರಣ ಕೊಠಡಿಯ ಅಧಿಕಾರಿಗಳು ತಿಳಿಸಿದ್ದಾರೆ.

                ಕಾರ್ಮಿಕರಿಗೆ ಸಾಕಷ್ಟು ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ತಲುಪಿಸುವ ಉದ್ದೇಶದಿಂದ ಅವಶೇಷಗಳ ನಡುವೆ 42 ಮೀಟರ್‌ ದೂರದವರೆಗೆ ದೊಡ್ಡ ವ್ಯಾಸದ ಪೈಪ್‌ಗಳನ್ನು ಅಳವಡಿಸಲಾಗಿದೆ ಎಂದಿದ್ದಾರೆ.

                 ಕಾರ್ಮಿಕರನ್ನು ಆದಷ್ಟು ಶೀಘ್ರ ಸುರಂಗದಿಂದ ಹೊರತರುವ ಉದ್ದೇಶದಿಂದ ಸಿಲ್ಕ್ಯಾರಾ ಮತ್ತು ಬಾರ್ಕೋಟ್‌ನಲ್ಲಿ ಒಂದು ತುದಿಯಿಂದ ಇನ್ನೊಂದು ತುದಿಗೆ ರಂಧ್ರ ಕೊರೆಯುವ ಮತ್ತು ಸುರಂಗದ ಮೇಲಿನ ಬೆಟ್ಟದಿಂದ ಲಂಬಾಕಾರವಾಗಿ ರಂಧ್ರ ಕೊರೆಯುವ ಕಾರ್ಯತಂತ್ರವನ್ನು ಅನುಸರಿಸಲಾಗುತ್ತಿದೆ ಎಂದು ಉತ್ತರಾಖಂಡ ಸರ್ಕಾರದ ವಿಶೇಷ ಕರ್ತವ್ಯ ಅಧಿಕಾರಿ ಭಾಸ್ಕರ್‌ ಖುಲ್ಬೆ ತಿಳಿಸಿದ್ದಾರೆ.

                  ಬೆಟ್ಟದ ಮೇಲಿನಿಂದ 330 ಅಡಿಗೂ ಹೆಚ್ಚು ಆಳಕ್ಕೆ ಲಂಬಾಕಾರವಾಗಿ ರಂಧ್ರ ಕೊರೆಯಬೇಕಾಗಿದೆ. ಇದಕ್ಕೆ ಅಗತ್ಯವಿರುವ ಯಂತ್ರಗಳನ್ನು ಬೆಟ್ಟದ ಮೇಲಕ್ಕೆ ಕೊಂಡೊಯ್ಯಲು ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದೂ ವಿವರಿಸಿದ್ದಾರೆ.

            ರಂಧ್ರ ಕೊರೆಯುವ ಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಶುಕ್ರವಾರದಿಂದ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಬಳಿಕ ಪರ್ಯಾಯ ಕಾರ್ಯಾಚರಣೆಗಾಗಿ ಬಿಆರ್‌ಒ ಮತ್ತು ಇತರ ಸಂಸ್ಥೆಗಳ ಸಿಬ್ಬಂದಿಯನ್ನು ನೇಮಿಸಲಾಗಿತ್ತು ಎಂದು ಮೂಲಗಳು ಹೇಳಿ‌ವೆ.

              ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಕೇಂದ್ರ ಸಂಸ್ಥೆಗಳ ನಡು‌ವಿನ ಸಮನ್ವಯಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಎನ್‌ಎಚ್‌ಐಡಿಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಮಹಮೂದ್‌ ಅಹಮ್ಮದ್‌ ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ ಎಂದಿವೆ. ಉತ್ತರಾಖಂಡ ಸರ್ಕಾರವು ನೋಡಲ್‌ ಅಧಿಕಾರಿಯಾಗಿ ನೀರಜ್‌ ಖೈರ್ವಾಲ್‌ ಅವರನ್ನು ನೇಮಕ ಮಾಡಿದೆ.

               ಕೇಂದ್ರ ಸರ್ಕಾರದ ಚಾರ್‌ಧಾಮ್ ಸರ್ವಋತು ರಸ್ತೆ ಯೋಜನೆಯಡಿ ಸುರಂಗ ನಿರ್ಮಿಸುತ್ತಿದ್ದ ವೇಳೆ ಭೂಕುಸಿತ ಸಂಭವಿಸಿ ಕಾರ್ಮಿಕರು ಅದರೊಳಗೆ ಸಿಲುಕಿಕೊಂಡಿದ್ದರು.

                                                        ಇನ್ನೆರಡು ದಿನಗಳಲ್ಲಿ ರಕ್ಷಣೆ ಸಾಧ್ಯತೆ: ಗಡ್ಕರಿ

                  ಎಲ್ಲವೂ ಸುಗಮವಾಗಿ ನಡೆದರೆ ಇನ್ನೆರಡು ದಿನಗಳಲ್ಲಿ ಕಾರ್ಮಿಕರನ್ನು ರಕ್ಷಿಸಲಾಗುವುದು ಎಂದು ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭಾನುವಾರ ತಿಳಿಸಿದ್ದಾರೆ. ರಂಧ್ರ ಕೊರೆಯುವ ಯಂತ್ರಗಳು ದುರಸ್ತಿಯಾದರೆ ಕಾರ್ಮಿಕರಿರುವ ಸ್ಥಳಕ್ಕೆ ರಕ್ಷಣಾ ಕಾರ್ಯಕರ್ತರು ಮಂಗಳವಾರ ತಲುಪಬಹುದು. ಪರ್ಯಾಯ ಮಾರ್ಗಗಳಲ್ಲೂ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದರು. ಸುರಂಗ ಕುಸಿದ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಚರಣೆಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು ಸುರಂಗದೊಳಗೆ ಸಿಲುಕಿರುವ ಕಾರ್ಮಿಕರಿಗೆ ಆಮ್ಲಜನಕ ಆಹಾರ ನೀರು ಮತ್ತು ಔಷಧಗಳನ್ನು ನಿರಂತರವಾಗಿ ಪೈಪ್‌ಗಳ ಮೂಲಕ ಪೂರೈಸಲಾಗುತ್ತಿದೆ. ವಿದ್ಯುತ್‌ ಸಂಪರ್ಕವನ್ನೂ ಒದಗಿಸಲಾಗಿದೆ' ಎಂದಿದ್ದಾರೆ. ಹಿಮಾಲಯ ಪ್ರದೇಶದ ಮಣ್ಣಿನ ಪದರಗಳು ಏಕ ರೂಪದಲ್ಲಿಲ್ಲ. ಕೆಲವೆಡೆ ಗಟ್ಟಿಯಾಗಿಯೂ ಇನ್ನು ಕೆಲವೆಡೆ ಮೃದುವಾಗಿಯೂ ಇವೆ. ಈ ಕಾರಣಕ್ಕೆ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ ಎಂದು ತಿಳಿಸಿದ್ದಾರೆ. 'ಏಳು ದಿನಗಳಿಂದ ಕಾರ್ಮಿಕರಿಗೆ ಡ್ರೈಫ್ರೂಟ್ಸ್‌ ಖಿನ್ನತೆ ಶಮನಕಾರಿ ಔಷಧ ಮೊದಲಾದವುಗಳನ್ನು ಕೂಡ ಪೂರೈಸಲಾಗುತ್ತಿದೆ' ಎಂದು ಹೆದ್ದಾರಿ ಹಾಗೂ ಸಾರಿಗೆ ಸಚಿವಾಲಯದ ಕಾರ್ಯದರ್ಶಿ ಅನುರಾಗ್ ಜೈನ್ ಹೇಳಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries