HEALTH TIPS

ಬಿಹಾರ: ಕರ್ತವ್ಯ ಲೋಪ- 12,987 ಶಾಲಾ ಶಿಕ್ಷಕರ ಸಂಬಳಕ್ಕೆ ಕತ್ತರಿ

                 ಟ್ನಾ: ಕರ್ತವ್ಯಕ್ಕೆ ದ್ರೋಹ ಎಸಗುವ ಶಿಕ್ಷಕರಿಗೆ ಬಿಸಿ ಮುಟ್ಟಿಸಿರುವ ಬಿಹಾರದ ಶಿಕ್ಷಣ ಇಲಾಖೆಯು 12,987 ಶಾಲಾ ಶಿಕ್ಷಕರ ಸಂಬಳಕ್ಕೆ ಕತ್ತರಿ ಹಾಕಿದೆ. ಸಂಬಳ ಕಡಿತಗೊಂಡಿರುವ ಶಿಕ್ಷಕರು ಶಾಲೆಗೆ ಸುದೀರ್ಘ ಅವಧಿಗೆ ಗೈರಾಗಿದ್ದರು. ಉನ್ನತಾಧಿಕಾರಿಗಳ ತಪಾಸಣೆ ವೇಳೆ ಶಿಕ್ಷಕರ ಬಂಡವಾಳ ಬಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

                 ಕಳೆದ ಆರು ತಿಂಗಳಲ್ಲಿ (ಡಿಸೆಂಬರ್ 23 ರವರೆಗೆ), ಸಕ್ಷಮ ಪ್ರಾಧಿಕಾರದಿಂದ ಅನುಮತಿಯಿಲ್ಲದೆ ಕರ್ತವ್ಯಕ್ಕೆ ಗೈರುಹಾಜರಾದ (ಆರು ತಿಂಗಳಿಂದ ಎರಡು ವರ್ಷಗಳವರೆಗೆ) 12,987 ಶಿಕ್ಷಕರ ವೇತನವನ್ನು ಇಲಾಖೆ ಕಡಿತಗೊಳಿಸಿದೆ. ಇದೇ ಅವಧಿಯಲ್ಲಿ, ವಿವಿಧ ಬೋಧನಾ ನಿಯಮ ಉಲ್ಲಂಘನೆಗಾಗಿ ಇಲಾಖೆಯು 39 ಜನರನ್ನು ಅಮಾನತುಗೊಳಿಸಿದ್ದು, 13 ಶಿಕ್ಷಕರನ್ನು ವಜಾಗೊಳಿಸಿದೆ ಎಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ. ಇನ್ನೂ 131 ಶಿಕ್ಷಕರ ವೇತನ ಕಡಿತಕ್ಕೆ ಶಿಫಾರಸು ಕಳುಹಿಸಲಾಗಿದೆ.

                 ಶಿಕ್ಷಕರ ಸಂಬಳ ಕಡಿತದ ಸುತ್ತೋಲೆ ಕುರಿತಂತೆ ಬಿಹಾರದ ಶಿಕ್ಷಣ ಇಲಾಖೆ ತೀವ್ರ ಟೀಕೆ ಎದುರಿಸುತ್ತಿದೆ.

               ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಿಭಾಗವು ಇತ್ತೀಚೆಗೆ ಹೊರಡಿಸಿದ ಅಸಂವಿಧಾನಿಕ ಮತ್ತು ನಿರಂಕುಶ ಆದೇಶಗಳನ್ನು ಕೂಡಲೇ ಸರಿಪಡಿಸಬೇಕೆಂದು ಡಿಸೆಂಬರ್ 26ರಂದು ಬಿಹಾರದ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದರು.

              ಇಂತಹ ಆದೇಶಗಳನ್ನು ಹೊರಡಿಸುವ ಮೂಲಕ ಇಲಾಖೆಯು ರಾಜ್ಯದಲ್ಲಿ ಶೈಕ್ಷಣಿಕ ವಾತಾವರಣವನ್ನು ನಾಶಮಾಡುವ ಉದ್ದೇಶವನ್ನು ತೋರುತ್ತಿದೆ ಎಂದು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಅಭಿಪ್ರಾಯಪಟ್ಟಿದ್ದರು.

                 ಬಿಹಾರದ ಮೈತ್ರಿ ಸರ್ಕಾರದ ಎರಡೂ ಪಕ್ಷಗಳು ಹಾಗೂ ವಿರೋಧ ಪಕ್ಷವಾದ ಬಿಜೆಪಿ ಸುತ್ತೋಲೆಗಳನ್ನು ತಕ್ಷಣವೇ ಹಿಂಪಡೆಯುವಂತೆ ಒತ್ತಾಯಿಸಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries