ಕೋಝಿಕ್ಕೋಡ್: ಕೇರಳದಲ್ಲಿ ವಾರ್ಷಿಕ 15,000 ಕೋಟಿ ಮೌಲ್ಯದ ಅಲೋಪತಿ ಔಷಧಗಳ ಬಳಕೆಯಾಗುತ್ತಿದೆ. ಆದರೆ ಕೇರಳದಲ್ಲಿ ಔಷಧಗಳ ಉತ್ಪಾದನೆ ಕೇವಲ 220 ಕೋಟಿ.ಮಾತ್ರವಿದೆ ಎಂದು ಅಂಕಿಅಂಶ ತಿಳಿಸಿದೆ.
ಇದರ ಗಮನಾರ್ಹ ಭಾಗವನ್ನು ಆಲಪ್ಪುಳದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಕೇರಳ ಸ್ಟೇಟ್ ಡ್ರಗ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಉತ್ಪಾದಿಸುತ್ತದೆ. ಈ ಔಷಧಿಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ವಿತರಿಸಲು ಬಳಸಲಾಗುತ್ತದೆ. ಸರ್ಕಾರ ಸುಮಾರು 200 ಕೋಟಿ ರೂಪಾಯಿ ಅನುದಾನವನ್ನು ಔಷಧಿ ಉತ್ಪಾದನೆಗೆ ಬಳಸುತ್ತಿದೆ.
ಕೇರಳ ಕೆಮಿಸ್ಟ್ಸ್ ಮತ್ತು ಡ್ರಗ್ಗಿಸ್ಟ್ಸ್ ಅಸೋಸಿಯೇಷನ್ ಕಿನೋ ಫಾರ್ಮಾ ಎಂಬ ಹೆಸರಿನಲ್ಲಿ ಜೆನೆರಿಕ್ ಔಷಧಿಗಳನ್ನು ತಯಾರಿಸುತ್ತದೆ. ಇಲ್ಲಿ ಹೆಚ್ಚಾಗಿ ಜೀವನಶೈಲಿ ರೋಗಗಳಿಗೆ ಔಷಧಿಗಳನ್ನು ಉತ್ಪಾದಿಸಲಾಗುತ್ತದೆ. ಈ ಸಂಸ್ಥೆ ವಾರ್ಷಿಕ ಕೇವಲ 5 ಕೋಟಿ ಮೌಲ್ಯದ ಔಷಧಗಳನ್ನು ತಯಾರಿಸುತ್ತದೆ. ಸಂಸ್ಥೆಯು ವಿಶ್ವ ಆರೋಗ್ಯ ಸಂಸ್ಥೆಯಿಂದ ಗುರುತಿಸಲ್ಪಟ್ಟಿದೆ ಮತ್ತು ಒಟ್ಟು 32 ಉತ್ಪನ್ನಗಳನ್ನು ಹೊಂದಿದೆ. ಕೇರಳದಲ್ಲಿ ಖಾಸಗಿ ವಲಯದ ಫಾರ್ಮಾಗಳು ಬೆರಳೆಣಿಕೆಯಷ್ಟು ಮಾತ್ರ ಇವೆ. ಬೇರೆ ರಾಜ್ಯಗಳಲ್ಲಿ ತಯಾರಾಗುವ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಬ್ರಾಂಡ್‍ಗಳು ಕೇರಳಕ್ಕೆ ಹರಿದು ಬರುತ್ತಿವೆ.
ಔಷಧ ಉತ್ಪಾದನೆಯಲ್ಲಿ ನಾವು ಹಿಂದುಳಿದಿದ್ದೇವೆ ನಿಜ. ಇದಕ್ಕೆ ಪರಿಹಾರವೆಂಬಂತೆ ಔಷಧ ಉತ್ಪಾದನೆಗೆ ಸರ್ಕಾರಿ ಒಡೆತನದಲ್ಲಿ ಎರಡು ವರ್ಷದೊಳಗೆ ಬೃಹತ್ ಫಾರ್ಮಾ ಕಂಪನಿ ಆರಂಭಿಸಲಾಗುವುದು. ಆಂಕೊಲಾಜಿ ಫಾರ್ಮಾ ಪಾರ್ಕ್ ಕಾಮಗಾರಿ ಆರಂಭವಾಗಿದೆ. ಔಷಧ ತಯಾರಕರಾದ ಖಾಸಗಿ ಉದ್ಯಮಿಗಳಿಗೆ ಉತ್ತೇಜನ ನೀಡಲಾಗುವುದು ಎಂದು ಕೈಗಾರಿಕಾ ಸಚಿವ ಪಿ. ರಾಜೀವ್ ತಿಳಿಸಿದ್ದಾರೆ.
ಗುಜರಾತ್, ಉತ್ತರಾಖಂಡ, ಆಂಧ್ರಪ್ರದೇಶ, ತೆಲಂಗಾಣ, ಹಿಮಾಚಲ ಮತ್ತು ಸಿಕ್ಕಿಂಗಳ ಡ್ರಗ್ಸ್ ಕೇರಳದಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದೆ. ಇಲ್ಲಿ ಔಷಧವನ್ನು ತಯಾರಿಸುವುದಾದಲ್ಲಿ ಕಡಿಮೆ ವೆಚ್ಚ, ಲಭ್ಯತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಬಹುದಾಗಿದೆ. ಕೇರಳದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿವೆ. ಜೀವ ಉಳಿಸುವ ಸಾಧನಗಳು, ವೈದ್ಯಕೀಯ ನೆರವು, ರೋಗನಿರ್ಣಯ ಸಾಧನಗಳು ಇತ್ಯಾದಿಗಳ ತಯಾರಿಕೆಯಲ್ಲಿ ಕೇರಳ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ಭಾರತದ ಒಟ್ಟು ಉತ್ಪಾದನೆಯ ಶೇ.20 ರಷ್ಟು ಕೇರಳದಲ್ಲಿದೆ. ಕೃತಕ ಹಲ್ಲುಗಳ ತಯಾರಿಕೆಯಲ್ಲಿ ಕೇರಳ ಏಷ್ಯಾದಲ್ಲಿ ಮೊದಲ ಸ್ಥಾನದಲ್ಲಿದೆ.
ಔಷಧ ಉತ್ಪಾದನೆಯ ಹಿನ್ನಡೆಗೆ ಕಾರಣಗಳು:
ಉದ್ಯಮ ಸ್ನೇಹಿ ವಾತಾವರಣ ಇಲ್ಲ.
ಪರವಾನಗಿ ರಾಜ್
ಹೆಚ್ಚಿನ ಉತ್ಪಾದನಾ ವೆಚ್ಚ
ದುಬಾರಿ ಬ್ರಾಂಡೆಡ್ ಔಷಧಿಗಳ ಮೇಲೆ ಮಲಯಾಳಿಗಳ ಅತಿಯಾದ ಪ್ರೀತಿ
ಜೆನೆರಿಕ್ ಔಷಧಿಗಳನ್ನು ಶಿಫಾರಸು ಮಾಡಲು ವೈದ್ಯರ ನಿರಾಕರಣೆ
ದೊಡ್ಡ ಔಷಧೀಯ ಕಂಪನಿಗಳ ಉಪಸ್ಥಿತಿ. ಅವರೊಂದಿಗೆ ಸ್ಪರ್ಧಿಸುವ ಸಾಮಥ್ರ್ಯ ಕೇರಳದ ಸಂಸ್ಥೆಗಳಿಗೆ ಇಲ್ಲ.
ದೊಡ್ಡ ಔಷಧೀಯ ಕಂಪನಿಗಳ ಮಾರ್ಕೆಟಿಂಗ್ ಶ್ರೇಷ್ಠತೆ
ಔಷಧ ಉತ್ಪಾದಿಸಲು ನುರಿತವರ ಕೊರತೆ
ಖಾಸಗಿ ಉದ್ಯಮಿಗಳಿಗೆ ಪ್ರೋತ್ಸಾಹದ ಕೊರತೆ
ಕೇರಳದಲ್ಲಿ ಮಾಲಿನ್ಯ ನಿಯಂತ್ರಣ ಕಾನೂನುಗಳು ಪ್ರಬಲ
ಕೇರಳದ ವಾತಾವರಣದಿಂದ ಆದ್ರ್ರತೆಯು ಕೆಲವು ರೀತಿಯ ಮಾತ್ರೆಗಳನ್ನು ತಯಾರಿಸಲು ಸೂಕ್ತವಲ್ಲ





