ನವದೆಹಲಿ: ಭಾರತದಲ್ಲಿ 19 ಮಿಲಿಯನ್ ಮಂದಿ ಕ್ರಿಪ್ಟೋ ಹೂಡಿಕೆದಾರರಿದ್ದು, ಪ್ರಮುಖ ಮೆಟ್ರೋ ನಗರಗಳಾದ ದೆಹಲಿ, ಬೆಂಗಳೂರು, ಹಾಗೂ ಮುಂಬೈ ದೇಶದ ಒಟ್ಟಾರೆ ಹೂಡಿಕೆಯ 5 ನೇ ಒಂದು ಪಾಲನ್ನು ಹೊಂದಿವೆ.
ವಿನಿಮಯ ವೇದಿಕೆ ಕಾಯಿನ್ ಸ್ವಿಚ್ ನೀಡಿರುವ ಮಾಹಿತಿಯ ಪ್ರಕಾರ ಹೂಡಿಕೆದಾರರ ಪೈಕಿ ಶೇ.9 ರಷ್ಟು ಮಹಿಳೆಯರಿದ್ದಾರೆ. ಶೇ.75 ರಷ್ಟು ಹೂಡಿಕೆದಾರರು 18-35 ವರ್ಷಗಳವರೆಗಿನ ಯುವಕ/ಯುವತಿಯರಾಗಿದ್ದಾರೆ ಎಂಬ ಮಾಹಿತಿಯನ್ನು ಈ ವಿನಿಮಯ ವೇದಿಕೆ ಬಹಿರಂಗಪಡಿಸಿದ್ದು ಯುವಕರಲ್ಲಿ ಕ್ರಿಪ್ಟೋ ಹೂಡಿಕೆ ಆಸಕ್ತಿ ಹೆಚ್ಚಿದೆ ಎಂಬುದನ್ನು ತೋರಿಸುತ್ತಿದೆ.





