ಕುಂಬಳೆ: ಕುಂಬಳೆ ಸನಿಹದ ಕುಂಟಂಗೇರಡ್ಕದಲ್ಲಿ ಶಂಕಿತ ಹುಚ್ಚುನಾಯಿ ಕಡಿತದಿಂದ ಮಕ್ಕಳು, ಮಹಿಳೆಯರು ಸೇರಿದಮತೆ ಎಂಟು ಮಂದಿ ಗಾಯಗೊಂಡಿದ್ದಾರೆ.
ಕುಂಟಂಗೇರಡ್ಕದ ಪ.ಜಾತಿ ಕಾಲನಿ, ವೆಲ್ಫೇರ್ ಶಾಲಾ ಸನಿಹದ ನಿವಾಸಿಗಳಾದ ಸುನಿತಾ, ಬ್ರಿಜೇಶ್, ಹರಿಶ್ರೀ, ಸರಾಸ್ ಸೇರಿದಂತೆ ಎಂಟು ಮಂದಿ ಗಾಯಾಳುಗಳು. ಗಂಭೀರ ಗಾಯಗೊಂಡಿರುವ ಸುನಿತಾ ಅವರನ್ನು ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಉಳಿದವರು ಕಾಸರಗೋಡಿನ ಜನರಲ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಭಾನುವಾರ ಸಂಜೆ ಘಟನೆ ನಡೆದಿದ್ದು, ಆಸುಪಾಸಿನ ಜನರನ್ನು ನಾಯಿ ಯದ್ವತದ್ವ ಕಡಿದಿದೆ. ನಂತರ ಹುಚ್ಚು ಬಾಧಿತ ನಾಯಿಯನ್ನು ಸ್ಥಳೀಯರು ಸೇರಿ ಹೊಡೆದುಕೊಂದುಹಾಕಿದ್ದಾರೆ.





